ವಿಶ್ವಾಸಾರ್ಹತೆಯ ಬಿಕ್ಕಟ್ಟಿನಲ್ಲಿ ವಿಶ್ವಸಂಸ್ಥೆ

23/09/2020

ವಿಶ್ವಸಂಸ್ಥೆ ಸೆ.23: ಸಮಗ್ರ ಸುಧಾರಣೆಗಳಿಲ್ಲದೆ ವಿಶ್ವಸಂಸ್ಥೆಯು “ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು” ಎದುರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ, ಎಲ್ಲಾ ಮಧ್ಯಸ್ಥಗಾರರಿಗೆ ಧ್ವನಿ ಯಾಗುವ ಸಮಕಾಲೀನ ಸವಾಲುಗಳನ್ನು ಪರಿಹರಿಸುವ ಮತ್ತು ಮಾನವ ಕಲ್ಯಾಣಕ್ಕೆ ಒತ್ತು ನೀಡುವ ಸುಧಾರಿತ ಬಹುಪಕ್ಷೀಯ ಶಕ್ತಿಯುತ ಸಂಘಟನೆ ಜಗತ್ತಿಗೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸುಧಾರಿತ ಬಹುಪಕ್ಷೀಯತೆಗಾಗಿ ಪ್ರಧಾನಿ ಮೋದಿಯವರ ಕರೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ, ಏಕೆಂದರೆ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾಯಿತ ಶಾಶ್ವತ ಸದಸ್ಯರಾಗಿ 2021ರ ಜನವರಿ 1 ರಿಂದ ಎರಡು ವರ್ಷಗಳ ಅವಧಿಗೆ ಸ್ಥಾನ ಪಡೆದಿದೆ.
“ನಾವು ಇಂದಿನ ಸವಾಲುಗಳನ್ನು ಹಳೆಯ ರಚನೆಗಳೊಂದಿಗೆ ಎದುರಿಸಲು ಸಾಧ್ಯವಿಲ್ಲ. ಸಮಗ್ರ ಸುಧಾರಣೆಗಳಿಲ್ಲದೆ, ವಿಶ್ವಸಂಸ್ಥೆ ವಿಶ್ವಾಸಾರ್ಹತೆಯ ಕ್ಕಟ್ಟನ್ನು ಎದುರಿಸುತ್ತಿದೆ” ಎಂದು ಮೋದಿ ಹೇಳಿದರು.