ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನೆ
23/09/2020

ಬೆಂಗಳೂರು ಸೆ.23 : ಕಾಂಗ್ರೆಸ್ ನ ಮುಖ್ಯ ಸಚೇತಕ ಅಜಯ್ ಸಿಂಗ್ ಕೊರೋನಾ ಮೇಲಿನ ಚರ್ಚೆ ವೇಳೆ ಸೋಂಕಿತ ಸರ್ಕಾರ ಎಂಬ ಬರಹ ಇರುವ ಕಪ್ಪು ಮಾಸ್ಕ್ ಧರಿಸಿ ಪ್ರತಿಭಟನಾ ರೂಪದಲ್ಲಿ ಕೊರೋನಾ ಭಾಷಣ ಮಾಡಿ ಸದನದ ಗಮನ ಸೆಳೆದರು. ನಿಯಮ 69 ಚರ್ಚೆ ವೇಳೆ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಕೊರೋನಾ ಸಂಬಂಧ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿದರು. ಈ ವೇಳೆ ಸೋಂಕಿತ ಸರ್ಕಾರ ಎಂಬ ಸ್ಲೋಗನ್ ಉಳ್ಳ ಮಾಸ್ಕ್ ಧರಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಪ್ರತಿಭಟನಾ ರೀತಿಯಲ್ಲಿ ಸೋಂಕಿತ ಸರ್ಕಾರ ಎಂಬ ಘೋಷಣೆಯ ಕಪ್ಪು ಮಾಸ್ಕ್ ಧರಿಸಿ, ಕೋವಿಡ್ 19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಮೊದಲಿಗೆ ಸರ್ಜಿಕಲ್ ಮಾಸ್ಕ್ ಧರಿಸಿದ್ದ ಅಜಯ್ ಸಿಂಗ್ ಮಾತಿನಮಧ್ಯೆ ಪ್ರತಿಭಟನಾರ್ಥವಾಗಿ ಸೋಂಕಿತ ಸರ್ಕಾರ ಎಂಬ ಬರಹದ ಕಪ್ಪು ಬಣ್ಣದ ಮಾಸ್ಕ್ ಧರಿಸಿದರು. ಆ ಮೂಲಕ ಸರ್ಕಾರಕ್ಕೆ ಸದನದಲ್ಲಿ ಪ್ರತಿಭಟನೆಯ ಬಿಸಿ ಮುಟ್ಟಿಸಲು ಮುಂದಾದರು.
