ಡ್ರಗ್ಸ್ ಬಗ್ಗೆ ರಶ್ಮಿತಾ ಚೆಂಗಪ್ಪ ಸ್ಪಷ್ಟೀಕರಣ

September 23, 2020

ಬೆಂಗಳೂರು ಸೆ.23 : ವಿಚಾರಣೆ ವೇಳೆ ಪೊಲೀಸರು ನನ್ನ ಮೊಬೈಲ್ ವಶಕ್ಕೆ ಪಡೆದಿಲ್ಲ. ಪ್ರಕರಣದ ಬಗ್ಗೆ ಕೆಲ ಮಾಹಿತಿ ನಮ್ಮಿಂದ ಸಿಗುತ್ತಾ ಅನ್ನೋ ನಿರೀಕ್ಷೆಯಲ್ಲಿ ನನ್ನ ವಿಚಾರಣೆ ಕರೆಸಲಾಗಿತ್ತು ಎಂದು ಕಿರುತೆರೆ ನಟಿ ರಶ್ಮಿತಾ ಚೆಂಗಪ್ಪ ಹೇಳಿದ್ದಾರೆ. ವಿಚಾರಣೆಗೆ ಕರೆದು ತಕ್ಷಣ ನಾವು ಆರೋಪಿಗಳಂತಲ್ಲ. ನಾನು ಈಗಾಗಲೇ ಒಂದು ವಿಚಾರಣೆಗೆ ಹಾಜರಾಗಿದ್ದೇನೆ. ಡ್ರಗ್ಸ್ ಮಾಫಿಯಾದ ಬಗ್ಗೆ ನಿಮಗೆ ಏನಾದ್ರೂ ಮಾಹಿತಿ ಇದೆಯಾ? ನೋಡಿದೀರಾ? ಎಂದು ತಿಳಿದುಕೊಳ್ಳಲು ನಮ್ಮನ್ನು ಕೇಳಲು ಪೊಲೀಸರು ಕರೆದಿದ್ದರು. ಕೇಳಿದ ಮಾಹಿತಿಯನ್ನು ನೀಡಿ ಬಂದಿದ್ದೇನೆ. ಪೊಲೀಸರು ವಿಚಾರಣೆಗೆ ಕರೆದ ಮರುದಿನವೇ ಹೋಗಿ ಸ್ಪಷ್ಟನೆ ನೀಡಿ ಬಂದಿದ್ದೇನೆ. ನಮಗೆ ಆ ರೀತಿಯ ವ್ಯಕ್ತಿಗಳ ಜೊತೆ ಯಾವುದೇ ಸಂಪರ್ಕ ಸಹ ಇಲ್ಲ. ನಾನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿಯೂ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

error: Content is protected !!