ವಿರಾಜಪೇಟೆ ಯೋಗೇಶ್ ನಾಯ್ಡು ಜೆಡಿಎಸ್‍ಗೆ ಸೇರ್ಪಡೆ

September 23, 2020

ಮಡಿಕೇರಿ ಸೆ.23 : ವಿರಾಜಪೇಟೆಯ ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ಯೋಗೇಶ್ ನಾಯ್ಡು ಅವರು ತಮ್ಮ ಸಂಗಡಿಗರೊಂದಿಗೆ ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡಿಗೊಂಡಿದ್ದಾರೆ.
ವಿರಾಜಪೇಟೆಯಲ್ಲಿ ನಡೆದ ಜೆಡಿಎಸ್ ತಾಲ್ಲೂಕು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಯೋಗೇಶ್ ನಾಯ್ಡು, ಪಂದ್ಯಂಡ ಲೋಕೇಶ್ ಹಾಗೂ ಕುಯ್ಮಂಡ ಲೋಕೇಶ್ ಅವರನ್ನು ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಜೆಡಿಎಸ್ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಮತ್ತಿತರ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

error: Content is protected !!