ಕಿರುಗೂರು ಕೃಷಿ ಮೋರ್ಚಾ ಅಧ್ಯಕ್ಷರಾಗಿ ರಾಕೇಶ್ ದೇವಯ್ಯ ಆಯ್ಕೆ

23/09/2020

ಮಡಿಕೇರಿ ಸೆ.23 : ಭಾರತೀಯ ಜನತಾ ಪಕ್ಷದ ಕಿರುಗೂರು ಕೃಷಿ ಮೋರ್ಚಾದ ಅಧ್ಯಕ್ಷರಾಗಿ ಚೆಪ್ಪುಡಿರ ರಾಕೇಶ್ ದೇವಯ್ಯ ನೇಮಕಗೊಂಡಿದ್ದಾರೆ.
ಕಿರುಗೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆ ತಾಲ್ಲೂಕು ಕೃಷಿ ಮೋರ್ಚಾದ ಉಪಾಧ್ಯಕ್ಷ ಚಟ್ಟಮಾಡ ಅನಿಲ್, ಗುಡ್ಡಮಾಡ ಅಪ್ಪಿ ಅವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಕೋದೇಂಗಡ ಸುಮನ, ಪ್ರಧಾನ ಕಾರ್ಯದರ್ಶಿಯಾಗಿ ಆಲೆಮಾಡ ಜಗತ್ ನಾಚಪ್ಪ, ಕಾರ್ಯದರ್ಶಿಯಾಗಿ ಚಿರಿಯಪಂಡ ರಾಜ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ತೀತರಮಾಡ ರಾಖಿ ಕರುಂಬಯ್ಯ, ಹೆಚ್.ಪಿ.ಹರ್ಷಿತ, ಕೆ.ಕಿರಣ, ಕೊಳ್ಳಿಮಾಡ ಸಚಿನ್, ಕೊಕ್ಕೆಂಗಡ ಹರೀಶ್, ಚಿರಿಯಪಂಡ ಪ್ರಶು ಪೆಮ್ಮಯ್ಯ ನೇಮಕಗೊಂಡಿದ್ದಾರೆ.
ಕಿರುಗೂರು ಶಕ್ತಿ ಕೇಂದ್ರದ ಪ್ರಮುಖ್ ಚೆಪ್ಪುಡಿರ ವಿವೇಕ್, ಸಹ ಪ್ರಮುಖ್ ಕಾಟಿಮಾಡ ರಾಜಪ್ಪ, ತಾಲ್ಲೂಕು ಕೃಷಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೋರೆರÀ ವಿನು, ಕಾರ್ಯದರ್ಶಿ ಮಲ್ಲಂಗಡ ದಿವೀನ್, ಸದಸ್ಯರಾದ ಐಯ್ಯಮಾಡ ಉದಯ, ಆದರ್ಶ್, ಸದಸ್ಯ ಅಲೆಮಾಡ ಸುದೀರ್, ಯುವ ಮೋರ್ಚ ಸದಸ್ಯ ಚಿರಿಯಪಂಡ ದೀಪಕ್ ಸುಬ್ಬಯ್ಯ, ಕಿರುಗೂರು ಬೂತ್ ಅಧ್ಯಕ್ಷ ಚಿರಿಯಪಂಡ ಕೀರ್ತನ್ ಪೆಮ್ಮಯ, ಯುವ ಮೋರ್ಚಾ ಅಧ್ಯಕ್ಷ ಕೋದೆಂಗಡ ಅಖಿಲ್, ಗ್ರಾ.ಪಂ ಮಾಜಿ ಸದಸ್ಯ ಮಂಜುನಾಥ, ಮತ್ತೂರು ಬೂತ್ ಅಧ್ಯಕ್ಷ ಪುತ್ತಮನೆ ಜೀವನ್, ಪ್ರಮುಖರಾದ ಪೆಮ್ಮಂಡ ವಿಶ್ವನಾಥ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.