ಸುಂಟಿಕೊಪ್ಪ ಮಲೆಯಾಳಿ ಸಮಾಜದ ವಾರ್ಷಿಕ ಮಹಾಸಭೆ

23/09/2020

ಸುಂಟಿಕೊಪ್ಪ ಸೆ.23 : ಸುಂಟಿಕೊಪ್ಪ ಮಲೆಯಾಳಿ ಸಮಾಜದ ವಾರ್ಷಿಕ ಮಹಾಸಭೆಯು ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ವಿ.ಎ.ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಹಿಂದೆ ಇದ್ದ ಸಮಿತಿಯೆ ಮುಂದುವರೆಯಬೇಕೆಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.
ಸಂಘದ ಅಧ್ಯಕ್ಷ ಸಂತೋಷ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಸುಂಟಿಕೊಪ್ಪ ಮಲೆಯಾಳಿ ಸಮಾಜದ ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವುದರ ಮೂಲಕ ಒಗ್ಗಟಾಗಿ ಸಮಾಜದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು. ಕೊರೊನಾ ಮಹಾಮಾರಿಂದ ಈ ವರ್ಷ ಓಣಂ ಹಬ್ಬ ಆಚರಣೆಗೆ ಅಡ್ಡಿಯಾಗಿದೆ. ಮುಂದಿನ ವರ್ಷ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಸಮಾಜದ ಎಲ್ಲರು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು. ಸಾರ್ವಜನಿಕ ಸೇವೆಗೆ ಮಲೆಯಾಳಿ ಸಮಾಜ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು. ಸಭೆಯಲ್ಲಿ ಸಮಿತಿ ಅಧ್ಯಕ್ಷರಾಗಿ ವಿ.ಎ.ಸಂತೊಂಷ್, ಉಪಾಧ್ಯಕ್ಷರಾಗಿ ರಾಜು, ರಾಮಕೃಷ್ಣ, ಗೌರವ ಅಧ್ಯಕ್ಷರಾಗಿ ಬಾಸ್ಕರನ್, ಪ್ರದಾನ ಕಾರ್ಯದರ್ಶಿಯಾಗಿ ವಿ.ವಿನೋದ್‍ಕುಮಾರ್,(ವಿನು) ಖಜಾಂಚಿಯಾಗಿ ಕೆ.ಪಿ.ವಿನೋದ್, ಸಂಘಟಣಾ ಕಾರ್ಯದರ್ಶಿಯಾಗಿ ಸತೀಶನ್, ಸಹ ಕಾರ್ಯದರ್ಶಿಯಾಗಿ ಸುಭ್ರಮಣಿ ಸಲಹಾ ಸಮಿತಿ ಸದಸ್ಯರಾಗಿ ಪಿ.ಸಿ.ಮೋಹನ್, ರಮೇಶ್ ಪಿÀಳ್ಳೆ, ರಂಜೀತ್, ಅನಿಲ್, ಶಿವಮಣಿ, ಅÀನೀಶ್, ವಿನೋದ್(ಚೇಟಾಯಿ) ಇವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಂಘದ ಸರ್ವ ಸದಸ್ಯರು ಹಾಜರಿದ್ದರು.