ನಾಪೋಕ್ಲುವಿನಲ್ಲಿ ಸಿಎನ್‍ಸಿಯಿಂದ ಕೊಡವ ಬುಡಕಟ್ಟು ಜಾಗೃತಿ ಸಮಾವೇಶ

24/09/2020

ಮಡಿಕೇರಿ ಸೆ. 24 : ಕೊಡವ ಬುಡಕಟ್ಟು ಸ್ಥಾನಮಾನದ ಬಗ್ಗೆ ನಡೆಯುತ್ತಿರುವ ಅಧ್ಯಯನ ಕುರಿತಂತೆ ಕೊಡವರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜಾಗೃತಿ ಸಮಾವೇಶ ನಡೆಯಿತು.
ನಾಪೋಕ್ಲು ಊರ್ ಮಂದ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಕೊಡವ ಬುಡಕಟ್ಟು ಸ್ಥಾನಮಾನದ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು.
ಸಮಾವೇಶದಲ್ಲಿ ಕುಲ್ಲೇಟಿರ ಅರುಣ್ ಬೇಬ, ಕಂಗಾಂಡ ಜಾಲಿ ಪೂವಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅಜ್ಜೆಟ್ಟಿರ ರಾಜ ಮುತ್ತಪ್ಪ, ಅಜ್ಜೆಟ್ಟಿರ ರಾಜ ಪೂವಮ್ಮ, ಚೀಯಕಪೂವಂಡ ಪೊನ್ನಪ್ಪ, ಕೇಟೋಳಿರ ಫಿರೋಜ್ ಗಣಪತಿ, ಕೇಲೇಟಿರ ದೇವಯ್ಯ, ಕುಂಡ್ಯೋಳಂಡ ಗಿರೀಶ್, ಬಟ್ಟಿರ ಸುಬ್ಬಯ್ಯ, ಕಂಗಾಂಡ ಸುರೇಶ್ ಗಣಪತಿ, ಕುಲ್ಲೇಟಿರ ದೇವಯ್ಯ, ಅಜಿತ್ ನಾಣಯ್ಯ, ಕುಲ್ಲೇಟಿರ ರತ್ನಾ ಮುತ್ತಪ್ಪ, ರವಿ ಮತ್ತಿತರರು ಇದ್ದರು.