ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ

24/09/2020

ಬಾಳೆ ದಿಂಡು ಎಂಬ ತಾತ್ಸಾರತ್ವ ಬೇಡ ಬಾಳೆಯ ದಿಂಡು ಎಂದರೆ. ವೈದ್ಯಲೋಕದಲ್ಲಿ ಪ್ರಾಮುಖ್ಯ ಸ್ಥಾನ ಪಡೆಯುವಂತಹುದು. ದಿಂಡನ್ನು ಹೇಗೆ ಬಳಸಿ ಕೊಂಡರೂ ಮನುಷ್ಯನ ಆರೋಗ್ಯಕ್ಕೆಲ್ಲಾ ರೀತಿಯಿಂದಲೂ ಪೂರಕ. ಮಾರಕ ಅನ್ನಿಸದು. ಇದು ಹೊಸ ಸಂಶೋ ಧನೆಯಲ್ಲ. ಬಹಳ ಹಿಂದಿನಿಂದಲೇ ಈ ಮುಖ್ಯ ಅಂಶಗಳನ್ನು ಕಂಡುಕೊಂಡು ಒಂದಲ್ಲಾ ಒಂದು ವಿಧದಲ್ಲಿ ಇದನ್ನು ಆಹಾರ ವಾಗಿ ಬಳಸುತ್ತಿದ್ದರು.

ಬೇಕಾಗುವ ಸಾಮಾಗ್ರಿಗಳು : ಸಾಕಷ್ಟು ಬಾಳೆದಿಂಡಿನ ತುಂಡುಗಳು, ಹಾಗೆಯೇ ಮಜ್ಜಿಗೆ, ಉಪ್ಪು , ಅರಸಿನ ಹುಡಿ, ಕಾರದ ಹುಡಿ, ನೆಲ್ಲಿ ಕಾಯಿ ಗಾತ್ರದ ಬೆಲ್ಲ, ಸಾಸಿವೆ ಅರ್ಧ ಚಮಚ, ಉದ್ದಿನ ಬೇಳೆ ಅರ್ಧ ಚಮಚ, ಕಾಯಿ ತುರಿ, ಕರಿಬೇವು.

ಮಾಡುವ ವಿಧಾನ:

ಬಾಳೆದಿಂಡನ್ನು ಸ್ವಚ್ಛಗೊಳಿಸಿ ನೂಲಿನಂತೆ ಬರುವ ನಾರನ್ನು ತೆಗೆದು ಕೊಳ್ಳಬೇಕು. ಸಣ್ಣ ಸಣ್ಣ ತುಂಡುಗಳಾಗಿ ಪರಿವರ್ತಿಸಿ ಬಾಣಲೆಯಲ್ಲಿ ಒಗ್ಗರಣೆ ಹಾಕಿ ಒಲೆಗೆ ಇಡಬೇಕು. ಬಿಂದಿಗೆ ಸಾಸಿವೆ, ಉದ್ದಿನಬೇಳೆ, ಕರಿಬೇವು ಸೇರಿಸಿದ ನಂತರ ಮಜ್ಜಿಗೆ, ಉಪ್ಪು, ಖಾರಪುಡಿ, ಬೆಲ್ಲ ಇವುಗಳನ್ನು ಎಲ್ಲಾ ಒಟ್ಟಿಗೆ ಕುದಿಸಿಕೊಂಡ ಬಳಿಕ ಬಾಣಲೆಯನ್ನು ಮುಚ್ಚಿರಿಸಿ ಸಣ್ಣ ಉರಿಯಲ್ಲಿ ಬೇಯಿಸಿಕೊಂಡು ಕೊನೆಯ ಹಂತದಲ್ಲಿ ಕಾಯಿ ತುರಿ ಸೇರಿಸಿ ಒಂದೆರಡು ಸಲ ತಿರುಗಿಸಿ ಮುಚ್ಚಿರಿದರೆ ಬಳಸಲು ರೆಡಿ ಆದಂತೆ.