ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಉದ್ದಿಮೆ ಸ್ಥಾಪಿಸಲು ಸಹಕರಿಸಿ : ಶಾಸಕ ಅಪ್ಪಚ್ಚು ರಂಜನ್ ಮನವಿ

September 24, 2020

ಮಡಿಕೇರಿ ಸೆ.24 : ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಉದ್ದಿಮೆ ಸ್ಥಾಪಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ. ಇದಕ್ಕಾಗಿ ಕಳೆದ ಮೂರು ವರ್ಷಗಳಿಂದ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ ಪೂರ್ಣ ವಿವರ ನಿಡುವಂತೆ ಕರ್ನಾಟಕ ವಿಧಾನಸಭೆಯಲ್ಲಿ ವಿಧಾನಸಭೆಯ ಶಾಸಕರಾದ ಅಪ್ಪಚ್ಚು ರಂಜನ್ ಅವರು ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಗೋವಿಂದ ಎಂ.ಕಾರಜೋಳ ಅವರಿಂದ ಮಾಹಿತಿ ಪಡೆದರು.
ಉತ್ತರಿಸಿದ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೊಗಿ ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ರಾಜ್ಯ ಸರ್ಕಾರದಿಂದ ಹಲವು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ದಿಮೆದಾರರು ಬಡ್ಡಿ ಸಹಾಯಧನ ಯೋಜನೆಯಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳಿಗೆ ಮತ್ತು ಸೇವಾ ಕ್ಷೇತ್ರದ ಉದ್ದಿಮೆಗಳ ಸ್ಥಾಪನೆಗೆ ಹಾಗೂ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಶೇ. 4 ರ ವಾರ್ಷಿಕ ಬಡ್ಡಿ ದರದಲ್ಲಿ ಅವಧಿ ಸಾಲವನ್ನು ನೀಡಲಾಗುತ್ತಿದೆ . ಈ ಯೋಜನೆಯಡಿ ಕನಿಷ್ಟ 10 ಲಕ್ಷ ರೂ ಗಳಿಂದ ಗರಿಷ್ಠ 10 ಕೋಟಿ ರೂ ವರೆಗೆ ಸಾಲದ ನೆರವು ದೊರೆಯತ್ತದೆ. ಶೇ 4ರ ವಾರ್ಷಿಕ ಬಡ್ಡಿ ದರದಲ್ಲಿ ನೀಡಲಾಗುವ ಅವಧಿ ಸಾಲದ ಮರುಪಾವತಿಯ ಅವಧಿಯು ಗರಿಷ್ಠ 8 ವರ್ಷ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಉದ್ಯಮಿಗಳ ಜವಳಿ ಮತ್ತು ಕೈ ಮಗ್ಗ ಘಟಕಗಳನ್ನು ಸ್ತಾಪಿಸಲು ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ವಿಶೇಷ ಯೋಜನೆಯಡಿಯಲ್ಲಿ ಶೇ 70ರ ಅನುದಾನದ ಸಮಿತಿ ಅವಧಿ ಸಾಲದ ನೆರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗಾಗಿ ಅತಿ ಸಣ್ಣ ಮತ್ತು ಸಣ್ಣ ಪ್ರಮಾಣದ ಯೋಜನಾ ವೆಚ್ಚ ರೂ.2 ಕೋಟಿ ಮೀರದ ಕೈಗಾರಿಕೆಗಳನ್ನು ಹೊಸದಾಗಿ ಸ್ಥಾಪಿಸುವವರಿಗೆ ಪೂರಕ ಭದ್ರತೆ ಖಾತರಿ ಯೋಜನೆ ಅನುಸ್ಠಾನಗೊಳಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಪಂಗಡದ ಉದ್ದಿಮೆದಾರರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಬಡ್ಡಿ ಸಹಾಯಧನದ ವಿವರ ನೀಡಿದರು.
ಪರಿಶಿಷ್ಟ ಜಾತಿ ಅವರಿಗೆ 2017-18 ರಲ್ಲಿ 37.50 ಕೋಟಿ,ಪರಿಶಿಷ್ಟ ಪಂಗಡದವರಿಗೆ 8.50 ಕೋಟಿ. ಮತ್ತು 2018-19 ರಲ್ಲಿ ಪರಿಶಿಷ್ಟ ಜಾತಿಯವರಿಗೆ 43 ಕೋಟಿ, ಪರಿಶಿಷ್ಟ ಪಂಗಡದವರಿಗೆ 12 ಕೋಟಿ. 2019-20 ರಲ್ಲಿ 39.50 ಕೋಟಿ, ಪರಿಶಿಷ್ಟ ಪಂಗಡದವರಿಗೆ 12 ಕೋಟಿ ಅನುದಾನವನ್ನು ಬಿಡುಗಡೆಮಾಡಲಾಗಿದೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ಕರ್ನಾಟಕ ಸರ್ಕಾರವು 2019-20ರಲ್ಲಿ 20.14ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸಚಿವರು ಉತ್ತರಿಸಿದರು.
ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಗಳ ಕಾಲೋನಿಗಳಿಗೆ ಮೂಲಭೂತ ಸೌಲಭ್ಯ ಇಲ್ಲದೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಹಾಗೂ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರ ತೆಗೆದುಕೊಂಡ ಕ್ರಮವೇನು ಇದಕ್ಕಾಗಿ ಮೀಸಲಿಟ್ಟ ಅನುದಾನವೆಷ್ಟು ಪೂರ್ಣ ವಿವರವನ್ನು ನೀಡುವುದಾಗಿ ತಿಳಿಸಿದರು
ಉತ್ತರಿಸಿದ ಗೋವಿಂದ ಎಂ.ಕಾರಜೋಳ ಅವರು ಕೊಡಗು ಜಿಲ್ಲೆಯಲ್ಲಿನ ಪರಿಶಿಷ್ಟ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕಳೆದ ಮೂರು ವರ್ಷಗಳಿಂದ ಮಂಜೂರಾತಿ ನೀಡಿ ಬಿಡುಗಡೆ ಮಾಡಿರುವ ಅನುದಾನ ವಿವರಗಳನ್ನು ತಿಳಿಸಿದರು. 2017-18 ರಲ್ಲಿ ಮಂಜೂರಾತಿ ಮೊತ್ತ 100 ಲಕ್ಷ, ಬಿಡುಗಡೆಯಾದ ಮಾಡಿದ ಮೊತ್ತ 100 ಲಕ್ಷ. 2018-19 ರಲ್ಲಿ ಮಂಜೂರಾತಿ ಮೊತ್ತ 1076 ಲಕ್ಷ ಬಿಡುಗಡೆಯಾದ ಮೊತ್ತ 694.56 ಲಕ್ಷ. 2019-20ರಲ್ಲಿ ಮಂಜೂರಾತಿ ಮೊತ್ತ 300 ಲಕ್ಷ, ಬಿಡುಗಡೆಯಾದ ಮೊತ್ತ 90 ಲಕ್ಷ . ಒಟ್ಟು ಮಂಜೂರಾತಿ ಮೊತ್ತ 1476 ಮತ್ತು ಬಿಡುಗಡೆಯಾದ ಮೊತ್ತ 884.56 ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು 2019 -20 ನೇ ಸಾಲಿನಲ್ಲಿ ಒಟ್ಟು 31 ಕಾಮಗಾರಿಗಳಿಗೆ ರೂ.150 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿಯನ್ನು ಸಚಿವರು ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕಾಗಿ ಮಂಜೂರಾದ ಮತ್ತು ಬಿಡುಗಡೆಯಾದ ಅನುದಾನ ಎಷ್ಟು ಹಾಗೂ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ, ಹೋಬಳಿ ಮಟ್ಟದ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಭವನಗಳ ನಿರ್ಮಾಣಕ್ಕಾಗಿ ಸರ್ಕಾರ ನಿಗಧಿಪಡಿಸಿರುವ ಅನುದಾನ ಎಷ್ಟು ಮತ್ತು ಯಾವ ಮಾನದಂಡದ ಆಧಾರದಲ್ಲಿ ನಿಗಧಿಪಡಿಸಲಾಗಿದೆ ಜಿಲ್ಲಾವಾರು ವಿವರ ನೀಡುವಂತೆ ವಿಧಾನ ಸಭಾ ಶಾಸಕರಾದ ಅಪ್ಪಚ್ಚು ರಂಜನ್ ಅವರು ಸಚಿವರನ್ನು ಪ್ರಶ್ನಿಸಿದರು.
ಉತ್ತರಿಸಿದ ಸಚಿವರು ಕಳೆದ ಮೂರು ವರ್ಷಗಳಿಂದ ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಮಂಜೂರಾತಿ ನೀಡಿ ಬಿಡುಗಡೆ ಮಾಡಿರುವ ಅನುದಾನ ವಿವರ ಈ ಕೆಳಂಡಂತಿರುತ್ತದೆ
2017-18ರಲ್ಲಿ ಮಂಜೂರಾತಿಯಾದ ಮೊತ್ತ 5738.96, ಬಿಡುಗಡೆಯಾದ ಮೊತ್ತ 3298.16 ಲಕ್ಷ. 2018-19ರಲ್ಲಿ 9647 ಲಕ್ಷ , ಬಿಡುಗಡೆಯಾದ ಮೊತ್ತ 3078 ಲಕ್ಷ, 2019-20ರಲ್ಲಿ ಮಂಜೂರಾತಿಯಾದ ಮೊತ್ತ 7076.07ಲಕ್ಷ, ಬಿಡುಗಡೆಯಾದ ಮೊತ್ತ 2360.52 ಲಕ್ಷ . ಒಟ್ಟು ಮಂಜೂರಾತಿಯಾದ ಮೊತ್ತ 22462.03 ಲಕ್ಷ. ಒಟ್ಟು ಬಿಡುಗಡೆಯಾದ ಮೊತ್ತ 8736.68 ಲಕ್ಷ
ಹಾಗೂ 2019 ರಲ್ಲಿ ಜಿಲ್ಲಾ ಮಟ್ಟದ ಭವನಗಳ ನಿರ್ಮಾಣಕ್ಕಾಗಿ ರೂ.400 ಲಕ್ಷ. ತಾಲ್ಲೂಕು ಮಟ್ಟದ ಭವನದ ನಿರ್ಮಾಣಕ್ಕಾಗಿ ರೂ.200 ಲಕ್ಷ, ಹೋಬಳಿ ಮಟ್ಟದ ಭವನದ ನಿರ್ಮಾಣಕ್ಕಾಗಿ ರೂ.75 ಲಕ್ಷ ಮತ್ತು ಗ್ರಾಮ ಮಟ್ಟದ ಭವನ ನಿರ್ಮಾಣಕ್ಕಾಗಿ ರೂ.20 ಲಕ್ಷಗಳನ್ನು ನಿಗಧಿಪಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಗೋವಿಂದ ಎಂ ಕಾರಜೋಳ ಅವರು ಮಾಹಿತಿ ನೀಡಿದರು.

error: Content is protected !!