ಪಿಂಚಣಿದಾರರು ಖಜಾನೆಯಲ್ಲಿ ಹೆಸರು ಇದೆಯೇ ಪರಿಶೀಲಿಸಿ

24/09/2020

ಮಡಿಕೇರಿ ಸೆ.24 : ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಿಂಚಣಿ ಪಡೆಯುತ್ತಿರುವ ಸರ್ಕಾರದ ಪಿಂಚಣಿದಾರರು/ ಕುಟುಂಬದ ಪಿಂಚಣಿದಾರರು ತಮ್ಮ ವ್ಯಾಪ್ತಿಯ ಖಜಾನೆಯಲ್ಲಿ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾ ಖಜಾನಾಧಿಕಾರಿ ಅವರು ಕೋರಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಪ್ ಬರೋಡಾ, ಭಾರತೀಯ ಯೂನಿಯನ್ ಬ್ಯಾಂಕ್‍ಗಳನ್ನು ಹೊರತು ಪಡಿಸಿ ಉಳಿದ ಬ್ಯಾಂಕುಗಳಲ್ಲಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರ ಪಟ್ಟಿಯಲ್ಲಿ ಅಭಿಮತ ನೀಡದಿರುವ ಪಿಂಚಣಿದಾರರ ಪಟ್ಟಿಯನ್ನು ಖಜಾನೆಗೆ ನೀಡಿದ್ದು, ಅದರ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಿಂಚಣಿದಾರರು ಜಿಲ್ಲೆಯಲ್ಲಿರುವ ಖಜಾನೆ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದಲ್ಲಿ ಕೂಡಲೇ ಲಿಖಿತ ದೂರನ್ನು ಖಜಾನೆಗೆ ಸಲ್ಲಿಸುವಂತೆ ಖಜಾನೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.