ಸೋಮವಾರಪೇಟೆ ಇನ್ನರ್‌ವ್ಹೀಲ್ ಕ್ಲಬ್‍ನಿಂದ ಸಾಂದೀಪನಿ ಶಾಲೆಗೆ ಸ್ಯಾನಿಟೈಸರ್ ಹಾಗೂ ಸ್ಟ್ಯಾಂಡ್ ವಿತರಣೆ

September 26, 2020

ಮಡಿಕೇರಿ ಸೆ.26 : ಸೋಮವಾರಪೇಟೆ ಇನ್ನರ್‍ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಸಾಂದೀಪನಿ ಶಾಲೆಗೆ ಉಚಿತವಾಗಿ ಸ್ಯಾನಿಟೈಸರ್ ಹಾಗೂ ಸ್ಟ್ಯಾಂಡ್ ವಿತರಿಸಲಾಯಿತು.
ಕ್ಲಬ್‍ನ ಅಧ್ಯಕ್ಷರಾದ ಕವಿತಾ ವಿರೂಪಾಕ್ಷ, ಪದಾಧಿಕಾರಿಗಳಾದ ತನ್ಮಯಿ ಪ್ರವೀಣ್, ಲತಾ ನಾಗೇಶ್, ಭಾಗ್ಯಕೃಷ್ಣ, ಪ್ರೇಮಾ ಹೃಷಿಕೇಶ್, ಕಾವೇರಿ ಸುರೇಶ್, ಮುಖ್ಯಶಿಕ್ಷಕಿ ಲಕ್ಷ್ಮೀ ಇದ್ದರು.