ಭಾರತೀಯ ಮಜ್ದೂರ್ ಸಂಘದಿಂದ ವಿಶ್ವಕರ್ಮ ಜಯಂತಿ ಆಚರಣೆ

ಸೋಮವಾರಪೇಟೆ ಸೆ. 26 : ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮೀಪದ ಆಲೇಕಟ್ಟೆ ಭಾರತೀಯ ಯುವಕ ಸಂಘದ ಸಭಾಂಗಣದಲ್ಲಿ ಭಗವಾನ್ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಬಿ.ಎಂ.ಎಸ್.ಶ್ರಮಿಕ ಗೀತೆಯೊಂದಿಗೆ ಚಾಲನೆ ನೀಡಲಾಯಿತು. ರಾಜ್ಯ ಉಪಾಧ್ಯಕ್ಷ ಇಂದ್ರೇಶ್ ಮಾತನಾಡಿ, ವಿಶ್ವಕರ್ಮ ದಿನಾಚರಣೆಯ ಮಹತ್ವ, ಕಾರ್ಮಿಕ ಸಂಘಟನೆ ರಚನೆಯ ಅವಶ್ಯಕತೆ, ಸಾಮಾಜಿಕ ಭದ್ರತೆ, ಸುರಕ್ಷತೆ, ಕಾರ್ಮಿಕರ ಹಕ್ಕುಗಳ ಬಗ್ಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಬಿ.ಎಂ.ಎಸ್. ಪದಾಧಿಕಾರಿ ಯೋಗೇಂದ್ರ, ಜಿಲ್ಲಾಧ್ಯಕ್ಷ ಸತೀಶ್, ತಾಲೂಕು ಬಿ.ಎಂ.ಎಸ್.ಅಧ್ಯಕ್ಷ ಮೋಹನ್, ಜಿಲ್ಲಾ ಕಾರ್ಯದರ್ಶಿ ಯೋಗಾನಂದ, ತಾಲೂಕು ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಗಣೇಶ್ ಇದ್ದರು. ನಂತರ ಸೋಮವಾರಪೇಟೆಯ ವಿ.ಎಸ್.ಎಸ್.ಎನ್. ಕಟ್ಟಡದಲ್ಲಿ ನೂತನವಾಗಿ ತೆರಯಲಾಗಿರುವ ಕೊಡಗು ಜಿಲ್ಲಾ ಭಾರತೀಯ ಮಜ್ದೂರ್ ಸಂಘದ ಕಚೇರಿಯನ್ನು ಉದ್ಘಾಟಿಸಲಾಯಿತು. ಆರ್.ಎಸ್.ಎಸ್.ಬೌದ್ಧಿಕ್ ಪ್ರಮುಖರಾದ ಪದ್ಮಾನಾಭ ಅವರು ಬಿ.ಎಂ.ಎಸ್.ಸ್ಥಾಪನೆಯ ಉದ್ದೇಶಗಳ ಬಗ್ಗೆ ಹೇಳಿದರು.
