ಆರ್.ಸುದರ್ಶನ್ ನಾಯ್ಡು ನಿಧನಕ್ಕೆ ಶ್ರೀರಾಮ ಸೇವಾ ಸಮಿತಿ ಶ್ರದ್ಧಾಂಜಲಿ ಸಲ್ಲಿಕೆ

26/09/2020

ಸುಂಟಿಕೊಪ್ಪ,ಸೆ.26 : ಶ್ರೀರಾಮ ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಸುಂಟಿಕೊಪ್ಪ ವರ್ತಕರ ಸಂಘದ ಮಾಜೀ ಅಧ್ಯಕ್ಷರಾಗಿದ್ದ ಆರ್.ಸುದರ್ಶನ್ ನಾಯ್ಡು ಇತ್ತೀಚಿಗೆ ನಿಧನ ಹೊಂದಿದ್ದು ಮೃತರ ಆತ್ಮಕ್ಕೆ ಶೃದ್ಧಾಂಜಲಿ ಆರ್ಪಿಸಲಾಯಿತು.
ಸುಂಟಿಕೊಪ್ಪ ವರ್ತಕರ ಸಂಘದ ಸ್ಥಾನಿಯ ಸಮಿತಿ ವತಿಯಿಂದ ಗುರುವಾರ ಸಂಜೆ ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ್ಪದಲ್ಲಿ ಮೃತರ ಶ್ರಧ್ಧಾಂಜಲಿ ಅಂಗವಾಗಿ ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆÀ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಈ ಸಂದರ್ಭ ಸುಂಟಿಕೊಪ್ಪ ವರ್ತಕರ ಸಂಘದ ಅಧ್ಯಕ್ಷ ಡಿ.ನರಸಿಂಹ, ನಿರ್ಧೆಶಕರಾದ .ಎಸ್.ಜಿ ಶ್ರೀನಿವಾಸ್, ಕೆ.ಡಿ.ರಾಮಯ್ಯ, ಎಂ.ಎ.ವಸಂತ, ವಹೀದ್ ಜಾನ್, ವಿ.ಎ.ಸಂತೋಷ್, ಜಗದೀಶ್ ರೈ, ಜೆ.ಎನ್.ಚಂದ್ರಶೇಕರ್, ಟಿ.ಕೆ.ರಾಜೇವ್, ವರ್ತಕರ ಸಂಘದ ಸ್ಥನೀಯ ಸಮಿತಿ ಉಪಾಧ್ಯಕ್ಷೆ ಶೀಲಾವತಿ ಬೋಪಣ್ಣ, ಕಾರ್ಯದರ್ಶಿ ಗಂಗಾಧರ್ ರೈ, ಸಹ ಕಾರ್ಯದರ್ಶಿ ಬಿ.ಡಿ.ರಾಜು ರೈ, ಸಮಿತಿ ಸದಸ್ಯರು ಹಾಜರಿದ್ದರು.