ಕರ್ಣಾಟಕ ಬ್ಯಾಂಕ್ ನಿಂದ ವೈದ್ಯಕೀಯ ಸಿಬ್ಬಂದಿಗಳಿಗೆ 1 ಸಾವಿರ ಪಿಪಿಇ ಕಿಟ್ ಕೊಡುಗೆ

September 26, 2020

ಮಡಿಕೇರಿ ಸೆ.26- ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳಿಗೆ ಕರ್ಣಾಟಕ ಬ್ಯಾಂಕ್ ನಿಂದ 1 ಸಾವಿರ ಪಿಪಿಇ ಕಿಟ್‍ಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿಜಾಯ್‍ಅವರ ಮೂಲಕ ಸಾಂಕೇತಿಕವಾಗಿ ನೀಡಲಾಯಿತು.

ಕರ್ಣಾಟಕ ಬ್ಯಾಂಕ್‍ನ ಮೈಸೂರು ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ಬಿ. ಚಂದ್ರಶೇಖರ ಅವರು, ಈ ಸಂದರ್ಭ ಮಾತನಾಡಿ, ಕರ್ಣಾಟಕ ಬ್ಯಾಂಕ್ ತನ್ನ ಸಾಮಾಜಿಕ ಹೊಣೆಗಾರಿಕಾಯೋಜನೆಅನ್ವಯಕೊಡಗಿನ ವೈದ್ಯಕೀಯಆರೋಗ್ಯ ಸಿಬ್ಬಂದಿಗಳಿಗೆ 3.60 ಲಕ್ಷರು. ಮೌಲ್ಯದ 1 ಸಾವಿರ ಪಿಪಿಇ ಕಿಟ್‍ಗಳನ್ನು ನೀಡುತ್ತಿದೆ. ಕೋರೋನಾ ಸಂಕಷ್ಟದ ಸಮಯದಲ್ಲಿಜನರ ಆರೋಗ್ಯ ರಕ್ಷಣೆಯಲ್ಲಿ ಕೋರೋನಾ ಸಮರ ಸೈನಿಕರಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಮಹತ್ನದ್ದು, ಈ ಹಿನ್ನಲೆಯಲ್ಲಿ ಈಗಾಗಲೇ ಕರ್ಣಾಟಕ ಬ್ಯಾಂಕ್ ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪಿಪಿಇ ಕಿಟ್‍ಗಳನ್ನು ನೀಡಿದ್ದು ಕೊಡಗು ಜಿಲ್ಲೆಯ ಆರೋಗ್ಯ ಕಾರ್ಯಕರ್ತರಿಗೂ ಇದೀಗ ನೆರವು ನೀಡಲು ಮುಂದಾಗಿದ್ದೇವೆಎಂದರು. ಇಂಥ ಸಾಮಾಜಿಕ ಹೊಣಗಾರಿಕೆಗೆ ಕರ್ಣಾಟಕ ಬ್ಯಾಂಕ್ ಸದಾ ಬದ್ದವಾಗಿದೆ ಎಂದೂ ಚಂದ್ರಶೇಖರ ಈ ಸಂದರ್ಭ ಹೇಳಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕರ್ಣಾಟಕ ಬ್ಯಾಂಕ್‍ನ ನೆರವನ್ನು ಪ್ರಶಂಶಿಸಿದರು.

ಈ ಸಂದರ್ಭ ಕರ್ಣಾಟಕ ಬ್ಯಾಂಕ್‍ನ ಮೈಸೂರು ಪ್ರಾದೇಶಿಕ ಕಛೇರಿಯ ಮುಖ್ಯಪ್ರಬಂಧಕರಾದ ಶ್ರೀಶ, ಮಡಿಕೇರಿ ಕರ್ಣಾಟಕ ಬ್ಯಾಂಕ್ ಶಾಖಾ ಪ್ರಬಂಧಕರಾದಎ.ರಮೇಶ್, ಪತ್ರಕರ್ತರಾದ ಅನಿಲ್ ಎಚ್.ಟಿ. ಹಾಜರಿದ್ದರು.

error: Content is protected !!