ಒಂದು ಭೂಮಿ ಒಂದು ಮನೆ ಆನ್‍ಲೈನ್ ಕಾರ್ಯಕ್ರಮ

September 26, 2020

ಮಡಿಕೇರಿ ಸೆ.26 : ಡಬ್ಲ್ಯುಡಬ್ಲ್ಯುಎಫ್-ಇಂಡಿಯಾ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯದ 1 ರಿಂದ 8ನೇ ತರಗತಿ ಸರ್ಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ “ಒಂದು ಭೂಮಿ ಒಂದು ಮನೆ” ಎಂಬ ಆನ್‍ಲೈನ್ ಕಾರ್ಯಕ್ರಮ ನಡೆಯಲಿದೆ.
ಗೂಗಲ್ ಜಾಲತಾಣದಲ್ಲಿ ಲಿಂಕ್ ಬಳಸಿ ನೋಂದಣಿ ಮಾಡಿಕೊಂಡು ಸೆಪ್ಟೆಂಬರ್‍ನಿಂದ ನವೆಂಬರ್ 2020ರವರೆಗೆ ಪ್ರತಿವಾರ ಅರ್ಧ ಗಂಟೆ ನಡೆಯುವ ಈ ಕಾರ್ಯಕ್ರಮವನ್ನು ದಿಕ್ಷಾ ಅಥವಾ ಫೇಸ್‍ಬುಕ್‍ನಲ್ಲಿಯೂ ವೀಕ್ಷಿಸಬಹುದು. ಕಾರ್ಯಕ್ರಮದ ನಂತರ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಿ ಫೀಡ್ ಬ್ಯಾಕ್ ನೀಡಬೇಕಾಗುತ್ತದೆ. ಶಿಕ್ಷಕರ ಅಥವಾ ಪೋಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ. ಭಾಗವಹಿಸಿದ ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಡಿಜಿಟಲ್ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಉಚಿತವಾಗಿ ಭಾಗವಹಿಸಬಹುದಾದ ಈ ಕಾರ್ಯಕ್ರಮದ ವಿವರಗಳಿಗೆ 9448857122 ಮತ್ತು 9845402299 ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಎಂ.ಎನ್.ಮುಷ್ಟೂರಪ್ಪ ಅವರು ತಿಳಿಸಿದ್ದಾರೆ.

error: Content is protected !!