ಎಂ.ಎ.ಉಸ್ಮಾನ್ರಿಗೆ ಸರ್ವೋದಯ ಸಮಿತಿಯಿಂದ ಶ್ರದ್ಧಾಂಜಲಿ

ಮಡಿಕೇರಿ ಸೆ.27 : ಸರ್ವೋದಯ ಸಮಿತಿಯ ಹಿರಿಯ ಸದಸ್ಯರಾಗಿದ್ದ ಎಂ.ಎ.ಉಸ್ಮಾನ್ ಅವರ ನಿಧನಕ್ಕೆ ಸಮಿತಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದಲ್ಲಿ ನಡೆದ ಸಂತಾಪ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ ಅವರು ಮಾತನಾಡಿ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದ ಉಸ್ಮಾನ್ ಅವರ ಸಾವು ದಿಗ್ಭ್ರಮೆ ಮೂಡಿಸಿದೆ ಎಂದರು.
ಸಮಿತಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ ಸ್ನೇಹ ಜೀವಿಯಾಗಿದ್ದ ಉಸ್ಮಾನ್ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ದುಡಿದವರು, ಅವರ ಅನಿರೀಕ್ಷಿತ ನಿಧನ ಸಮಾಜಕ್ಕೆ ಮತ್ತು ಸಂಘ-ಸಂಸ್ಥೆಗಳಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಕಾರ್ಯದರ್ಶಿ ಕೆ.ಟಿ.ಬೇಬಿಮ್ಯಾಥ್ಯು ಸದಸ್ಯರುಗಳಾದ ಯಶೋಧ, ಸುರಯ್ಯ ಅಬ್ರಾರ್, ಸ್ವರ್ಣಲತಾ, ಮಿನಾಜ್ ಪ್ರವೀಣ್, ಟಿ.ಎಂ.ಮುದ್ದಯ್ಯ, ಅಂಬೇಕಲ್ ನವೀನ್ ಕುಶಾಲಪ್ಪ, ಚುಮ್ಮಿ ದೇವಯ್ಯ ಹಾಗೂ ಆರ್.ಪಿ.ಚಂದ್ರಶೇಖರ್ ಮಾತನಾಡಿ ಸಂತಾಪ ಸೂಚಿಸಿದರು.
ಮೌನಾಚರಣೆಯ ಮೂಲಕ ಎಂ.ಎ.ಉಸ್ಮಾನ್ ಹಾಗೂ ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವ ಅರ್ಪಿಸಲಾಯಿತು.