2 ಹೆಲಿಕಾಫ್ಟರ್, 3 ಡ್ರೋನ್ ನಾಶ ಯೆರೆವಾನ್

28/09/2020


ಯೆರೆವಾನ್ ಸೆ.28 : ನಾಗೋರ್ನೊ-ಕಾರ್ಬಖ್ ಪ್ರದೇಶದಲ್ಲಿ ಅಜರ್ ಬೈಜಾನ್ ಗೆ ಸೇರಿದ ಎರಡು ಹೆಲಿಕಾಪ್ಟರ್‍ಗಳು ಮತ್ತು ಮೂರು ಡ್ರೋನ್‍ಗಳನ್ನು ನಾಶಪಡಿಸಿರುವುದಾಗಿ ಅರ್ಮೇನಿಯ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.
ವಿವಾದಾತ್ಮಕ ಪ್ರದೇಶದಲ್ಲಿನ ನಾಗರಿಕರ ವಸಾಹತುಗಳ ಮೇಲೆ ಅಜರ್ ಬೈಜಾನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ. ಸದ್ಯ, ಈ ಪ್ರದೇಶದಲ್ಲಿ ಪ್ರತಿದಾಳಿ ನಡೆಸುತ್ತಿರುವುದಾಗಿ ಅಜರ್ ಬೈಜಾನ್ ರಕ್ಷಣಾ ಸಚಿವಾಲಯ ಭಾನುವಾರ
ಅರ್ಮೇನಿಯ ಮತ್ತು ಅಜರ್ ಬೈಜಾನ್ ಎರಡು ರಾಷ್ಟ್ರಗಳು ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದವು. ಸೋವಿಯತ್ ಹೊಡೆದು ಚೂರಾದ ನಂತರ ಈ ಎರಡು ರಾಷ್ಟ್ರಗಳು ಹೊಸ ದೇಶಗಳಾಗಿ ಉದಯವಾಗಿದ್ದವು. ಅಂದಿನಿಂದ ಇಂದಿನವರೆಗೂ ಈ ಎರಡು ರಾಷ್ಟ್ರಗಳ ನಡುವೆ 7 ಜಿಲ್ಲೆಗಳಿಗಾಗಿ ಸಂಘರ್ಷ ನಡೆಯುತ್ತಿದೆ.
ಈ ಏಳು ಜಿಲ್ಲೆಗಳನ್ನು ನಾಗರ್ನೋಕ್-ಕರಭಾಕ ಎಂದು ಗುರುತಿಸಲಾಗಿದ್ದು ಇವು ಎರಡು ದೇಶಗಳ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಈ ಪ್ರದೇಶಕ್ಕಾಗಿ ಎರಡು ದೇಶಗಳು ಸಂಘರ್ಷಕ್ಕೆ ಇಳಿದಿವೆ.