ಸಂಪಾಜೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

28/09/2020

ಮಡಿಕೇರಿ ಸೆ.28 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಸಂಪಾಜೆ, ಚೆಂಬು ರೈತ ಸಂಘ ಹಾಗೂ ಬಿಜೆಪಿಯೇತರ ರಾಜಕೀಯ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದವು.
ಸಂಪಾಜೆ ಗೇಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್.ಸುರೇಶ್, ಚೆಂಬು ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ವರಿ, ಮಹಿಳಾ ಘಟಕದ ಸಂಪಾಜೆ ವಲಯ ಅಧ್ಯಕ್ಷೆ ಪ್ರೀತಿಕಾ, ರಿಯಾಜ್ ಕೊಯನಾಡು, ಎಂ.ಪಿ.ವಾಸು, ಮೋಹನ ಬಾಳೆಕಜೆ, ಜಾಫರ್ ಕೊಯನಾಡು, ದೇವಜನ ದೇವಪ್ಪ, ಬಿ. ರಘುನಾಥ್, ಕೆ.ಬಿ.ಮಾಧವ, ಮಹೇಂದ್ರ ಚಡಾವು, ನಾಸಿರ್ ತಿಲಕ ಚಡಾವು, ಉಮೇಶ ಪೂಜಾರಿ, ಸುರೇಂದ್ರ, ರಫೀಕ್ ಚಡಾವು, ಉಮ್ಮರ್ ಚಡಾವು, ಜಯಪ್ರಕಾಶ್ ಗುಡ್ಡೆಗದ್ದೆ, ಗಣೇಶ್ ಗುಡ್ಡೆಗದ್ದೆ, ಸುರೇಂದ್ರ ಕೊಯನಾಡು, ಹರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.