ಮಡಿಕೇರಿಯ ವಿವಿಧೆಡೆ ಸೆ.29 ರಂದು ವಿದ್ಯುತ್ ವ್ಯತ್ಯಯ

September 28, 2020

ಮಡಿಕೇರಿ ಸೆ.28 : ಮಡಿಕೇರಿ, ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಜಿ.ಟಿ.ರೋಡ್ ಫಿüೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿದ್ದು, ಸೆಪ್ಟೆಂಬರ್, 29 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಸುದರ್ಶನ್ ವೃತ್ತ, ಚೈನ್‍ಗೇಟ್, ಪುಟಾಣಿನಗರ, ದೇಚೂರು, ಸಿದ್ದಾಪುರ ರಸ್ತೆ, ಜಯನಗರ, ಕೊಡಗು ವಿದ್ಯಾಲಯ ಇಬ್ನಿವಾಳವಾಡಿ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ಕೋರಿದ್ದಾರೆ.