ಎಸ್‍ಪಿಬಿಗೆ ಭಾರತರತ್ನ ನೀಡಲು ಒತ್ತಾಯ

29/09/2020

ಅಮರಾವತಿ ಸೆ.29 : ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಭಾರತ ರತ್ನ” ನೀಡುವಂತೆ ಆಂಧ್ರಪ್ರದೇಶ ಸರ್ಕಾರ ಸೋಮವಾರ ಕೇಂದ್ರವನ್ನು ಒತ್ತಾಯಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಂಬಂಧ ಪತ್ರ ಬರೆದಿದ್ದು ಎಸ್ಪಿಬಿ ಎಂದು ಖ್ಯಾತವಾಗಿರುವ ಬಾಲಸುಬ್ರಹ್ಮಣ್ಯಂ ಅವರ ಹೆಸರನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಾಗಿ ಪರಿಗಣಿಸುವಂತೆ ಕೋರಿದ್ದಾರೆ.
ಅಂತಹಾ ಶ್ರೇಷ್ಠ ಗಾಯಕನ ಜನ್ಮಸ್ಥಳ ಆಂಧ್ರಪ್ರದೇಶವಾಗಿರಿವಿದಿ ನಮ್ಮ ಅದೃಷ್ಟ ಎಂದಿರುವ ಜಗನ್ ಎಸ್ಪಿಬಿಅಕಾಲಿಕ ನಿಧನವು ದೇಶಾದ್ಯಂತದ ಲಕ್ಷಾಂತರ ಅಭಿಮಾನಿಗಳಿಗೆ ಮತ್ತು ಅಂತರರಾಷ್ಟ್ರೀಯ ಸಂಗೀತ ಪ್ರೇಮಿಗಳಿಗೂ ಸಾಕಷ್ಟು ಸಂಕಟವನ್ನುಂಟು ಮಾಡಿದೆ ಎಂದು ಹೇಳಿದರು. ಎಸ್ಪಿಬಿ ಅಪಾರ ಜನಪ್ರಿಯತೆ ಮತ್ತು ಜಾಗತಿಕ ಸಂಗೀತ ಕ್ಷೇತ್ರದ ಮೇಲೆ ಅವರ 50 ವರ್ಷಗಳ ಪ್ರಬಾವ ವಿಶ್ವದಾದ್ಯಂತ ಸಂಗೀತ ಅಭಿಮಾನಿಗಳಿಂದ ಗೌರವ, ಆದರಗಳನ್ನು ಪಡೆದಿದ್ದಾರೆ. ಎಸ್ಪಿಬಿ ಅವರ ಸಾಧನೆಗಳು ಸಂಗೀತವನ್ನು ಮೀರಿವೆ ಮತ್ತು ಅವರು ಸಂಯೋಜನೆ ಮಾಡಿದ್ದ ಹಾಡುಗಳು ಅವರನ್ನು ಇನ್ನಷ್ಟು ಎತ್ತರಕ್ಕೆ ಒಯ್ದಿವೆ ಎಂದು ಆಂಧ್ರ ಸಿಎಂ ಹೇಳಿದ್ದಾರೆ.