ಸೋಮವಾರಪೇಟೆಯಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

29/09/2020

ಸೋಮವಾರಪೇಟೆ ಸೆ. 29 : ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ನೂತನವಾಗಿ ಕೈಗೊಂಡಿರುವ ಆಲೇಕಟ್ಟೆ-ಗೌಡಸಮಾಜ-ಗಾಂಧಿನಗರ ಕಾಂಕ್ರೀಟ್ ರಸ್ತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜೀ ಎಂಎಲ್‍ಸಿ ಎಸ್.ಜಿ. ಮೇದಪ್ಪ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ಹೆಚ್.ಎನ್. ತಂಗಮ್ಮ, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಕಾರ್ಯದರ್ಶಿ ಗಣಪತಿ, ಚೌಡ್ಲು ಗ್ರಾ.ಪಂ. ಸದಸ್ಯರುಗಳಾದ ಮಂಜುಳಾ ಸುಬ್ರಮಣಿ, ಧರ್ಮ, ನಂದಕುಮಾರ್, ಇಲಾಖೆಯ ಅಭಿಯಂತರ ವೀರೇಂದ್ರ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.