ವಿರಾಜಪೇಟೆಯಲ್ಲಿ ಖಾಸಗಿ ಬಸ್ಸು ಕಾರ್ಮಿಕರಿಗೆ ಕಿಟ್ ವಿತರಣೆ

29/09/2020

ವಿರಾಜಪೇಟೆ:ಸೆ:28: ಕಾರ್ಮಿಕ ಮತ್ತು ರೈತ ದೇಶದ ಬೆನ್ನಲೆಬು ಪ್ರತಿಯೋಂದು ಕ್ಷೇತ್ರದಲ್ಲಿ ದುಡಿಯುವ ಪ್ರತಿಯೋಬ್ಬ ವ್ಯಕ್ತಿಯು ಕಾರ್ಮಿಕನಾಗುತ್ತಾನೆ. ಪ್ರಸ್ತುತ ದಿನಗಳು ಕೊರೋನಾ ಸೋಂಕಿನಿಂದ ಕಾರ್ಮಿಕ ದುಡಿಮೆಯಿಲ್ಲದೆ ನೊಂದಿದ್ದಾನೆ ಮಾನವೀಯ ನೆಲೆಯಲ್ಲಿ ಕಿಟ್ ವಿತರಿಸಲಾಗುತ್ತಿದೆ ಎಂದು ಎ.ಕೆ.ಸುಬ್ಬಯ್ಯ ಧತ್ತಿನಿಧಿಯ ಮುಖ್ಯಸ್ಥ ನರೇನ್ ಕಾರ್ಯಪ್ಪ ಹೇಳಿದರು.

ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘ ವಿರಾಜಪೇಟೆ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆ ಮತ್ತು ಸದಸ್ಯರಿಗೆ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊರೋನಾ ಸೋಂಕು ದೇಶವ್ಯಾಪಿ ಹರಡಿ ಕಾರ್ಮಿಕರನ್ನು ಮತ್ತು ದೇಶವನ್ನು ಆತಂಕಕ್ಕಿಡು ಮಾಡಿದೆ ಇಂತಹ ಸಂದರ್ಭದಲ್ಲಿ ಕಾರ್ಮಿಕರ ಶ್ರೇಯ ಭಯಸುವುದು ಶ್ರೀಮಂತ ಸಮಾಜದ ಭಾಗವಾಗಬೇಕು. ಕಾರ್ಮಿಕರು ಶ್ರಮಜೀವಿಗಳಾಗಿದ್ದಾರೆ. ಕೊರೋನಾ ಸೋಂಕು ಗಾಳಿಯಂತೆ ಹರಡುತ್ತಿರುವುದರಿಂದ ಖಾಸಗಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿತ್ತು ಬಸ್ಸುಗಳನ್ನು ಅವಲಂಭಿಸಿಕೊಂಡು ಜೀವನ ಸಾಗಿಸುವ ಕಾರ್ಮಿಕ ಬವಣೆಯನ್ನು ಅರಿತು ಧತ್ತಿನಿಧಿಯಿಂದ ಕಿಟ್ ವಿತರಿಸಲಾಗಿದೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕೊಡಗಿನಲ್ಲಿ ಬಹುತೇಕ ಮಂದಿ ಸಂಚಾರಕ್ಕೆ ಖಾಸಾಗಿ ಬಸ್ಸುಗಳನ್ನು ಅವಲಂಭಿಸಿದ್ದು, ಕೊರೊನಾ ಸೋಂಕಿನಿಂದ ಬಸ್ಸುಗಳ ಸಂಚಾರಕ್ಕೆ ಕುತ್ತು ತಂದಿತು. ಇದರಿಂದ ಬಸ್ಸುಗಳನ್ನು ನಂಬಿದ್ದ ಕಾರ್ಮಿಕ ಪಾಡು ಅತಂತ್ರವಾಗಿದ್ದು, ಸಂಘಟನೆ ಸಂಸ್ಥೆಗಳು ಕಾರ್ಮಿಕರ ದುಖ: ಅರಿತು ದಿನಬಳಕೆಯ ವಸ್ತುಗಳನ್ನು ನೀಡುತ್ತಿರುವುದು ಸಂತಸದಾಯಕವಾಗಿದೆ ಎಂದರು.
ಕಾರ್ಮಿಕರು ಸಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸೋಂಕಿನ ವಿರುದ್ದ ಹೊರಾಡುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಆಡ್ವೋಕೇಟ್ ಜನರಲ್ ಮತ್ತು ಎ.ಕೆ.ಸುಬ್ಬಯ್ಯ ಟ್ರಸ್ಟ್ ನ ಮುಖ್ಯಸ್ಥ ಎ.ಎಸ್ ಪೊನ್ನಣ್ಣ ಸಂಸ್ಥೆಯ ವತಿಯಿಂದ ಖಾಸಗಿ ಬಸ್ಸು ಕಾರ್ಮಿಕರಿಗೆ ಕಿಟ್ ವಿತರಿಸಿದರು.

ಸಂಘದ ಕಾನೂನು ಸಲಹೆಗಾರ ಟಿ.ಪಿ.ಕೃಷ್ಣ ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ರಾಜೇಶ್ ಪದ್ಮನಾಭ ಮಾತನಾಡಿದರು.
ಕೊಡಗು ಖಾಸಗಿ ಬಸ್ಸು ಕಾರ್ಮಿಕ ಸಂಘ ವಿರಾಜಪೇಟೆ ಅಧ್ಯಕ್ಷ ಎನ್.ಪಿ ದಿನೇಶ್ ನಾಯರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಗಣೇಶ್ ಬಿ.ಆರ್ ಉಪಸ್ಥಿತರಿದ್ದರು.