ಮಡಿಕೇರಿಯಲ್ಲಿ ಹರಿದಾಸ ಅಪ್ಪಚ್ಚಕವಿ 152 ನೇ ಜನ್ಮದಿನಾಚರಣೆ : ಪುಸ್ತಕ ಬಿಡುಗಡೆ

29/09/2020

ಮಡಿಕೇರಿ ಸೆ.29 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗಿನ ಹೆಸರಾಂತ ಸಾಹಿತಿ, ನಾಟಕಗಾರ, ಕವಿ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 152ನೇ ಜನ್ಮ ಶತಮಾನೋತ್ಸವ ಹಾಗೂ ಪೊಂಗುರಿ ಮತ್ತು ಪುಸ್ತಕ ಬಿಡುಗಡೆ” ಕಾರ್ಯಕ್ರಮವು ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಡಾ. ಕಳ್ಳಿಚಂಡ ರಶ್ಮಿ ನಂಜಪ್ಪ ಬರೆದ “ಪೊಮ್ಮೊದಿರ ಪೊನ್ನಪ್ಪ” (ನಾಟಕ) ಪುಸ್ತಕ ಮತ್ತು ಕೊಟ್ಟುಕತ್ತಿರ ಜಾಲಿ ಸೋಮಣ್ಣ ಬರೆದ “ಡೌರಿ ಡೈವೋರ್ಸ್” ಪುಸ್ತಕ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ತ್ರೈಮಾಸಿಕ “ಪೊಂಗುರಿ” ಸಂಚಿಕೆ ಬಿಡುಗಡೆ ಮಾಡಲಾಯಿತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ, ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಹಾಗೂ ಕೊಡಗು ಪ್ರೆಸ್ಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಇತರರು ಹಾಜರಿದ್ದರು.