ಸೋಮವಾರಪೇಟೆಯಲ್ಲಿ ಕೋವಿಡ್ ಗೆ ಮೊದಲ ಬಲಿ

29/09/2020

ಮಡಿಕೇರಿ ಸೆ. 29 : ಸೋಮವಾರಪೇಟೆ ಪಟ್ಟಣದಲ್ಲಿ ಕೋವಿಡ್ ಗೆ ಮೊದಲ ಸಾವು ಸಂಭವಿಸಿದೆ. ಬಾಣಾವಾರ ರಸ್ತೆ ನಿವಾಸಿ 62 ವರ್ಷದ ಪುರುಷ ಮೃತ ವಕ್ತಿ. ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚೇತರಿಸಿಕೊಳ್ಳದ ಅವರು ಮನೆಯಲ್ಲಿಯೇ ನಿಧನರಾದರು. ಇಂದು ಬೆಳಗ್ಗೆ ಮೃತದೇಹದ ಮೂಗಿನ ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್ ಇರುವುದು ದೃಢಪಟ್ಟಿದೆ.
ಕೋವಿಡ್ ಮಾರ್ಗಸೂಚಿಯಂತೆ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.