ಕಿರುಗೂರು ಶಕ್ತಿ ಕೇಂದ್ರದಿಂದ ದೀನ್ ದಯಾಳ್ ಜನ್ಮ ದಿನಾಚರಣೆ

30/09/2020

ಮಡಿಕೇರಿ ಸೆ.30 : ಭಾರತೀಯ ಜನತಾ ಪಕ್ಷದ ಕಿರುಗೂರು ಶಕ್ತಿ ಕೇಂದ್ರದ ವತಿಯಿಂದ ದೀನ್ ದಯಾಳ್ ಉಪಾಧ್ಯಾಯ ಅವರ 104ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಕ್ಷದ ಕಚೇರಿಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಚೆಪ್ಪುಡಿರ ವಿವೇಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ ಮಾತನಾಡಿದ ಅವರು ದಯಾಳ್ ಅವರ ಆದರ್ಶಗಳು ಇಂದಿನ ಯುವ ಸಮೂಹಕ್ಕೆ ಮಾದರಿ ಎಂದರು.
ಕಿರುಗೂರು ಬೂತ್ ಅಧ್ಯಕ್ಷ ಚಿರಿಯಪಂಡ ಕೀರ್ತನ್ ಪೆಮ್ಮಯ, ಮತ್ತೂರು ಬೂತ್ ಅಧ್ಯಕ್ಷ ಜೀವನ್, ಪೊನ್ನಂಪೇಟೆ ಮಹಾಶಕ್ತಿ ಕೇಂದ್ರದ ಪ್ರಮುಖ್ ಅಲೆಮಾಡ ಸುಧೀರ್, ಗ್ರಾ.ಪಂ ಮಾಜಿ ಸದಸ್ಯ ಪಿ.ಎಸ್.ಮಂಜುನಾಥ್, ಕೃಷಿ ಮೋರ್ಚಾದ ತಾಲ್ಲೂಕು ಸದಸ್ಯ ಕಾಕಮಾಡ ಆದರ್ಶ್, ಯುವ ಮೋರ್ಚಾ ಸದಸ್ಯ ದೀಪಕ್ ಸುಬ್ಬಯ್ಯ, ಕಿರುಗೂರು ಕೃಷಿ ಮೋರ್ಚಾದ ಅಧ್ಯಕ್ಷ ಚೆಪ್ಪುಡೀರ ರಾಕೇಶ್, ಪ್ರಧಾನ ಕಾರ್ಯದರ್ಶಿ ಅಲೆಮಾಡ ಜಗತ್, ಯುವಮೋರ್ಚಾದ ಅಧ್ಯಕ್ಷ ಅಖಿಲ್ ಮುತ್ತಪ್ಪ ಹಾಗೂ ಕಾರ್ಯಕರ್ತರಾದ ಪೆಮ್ಮಂಡ ವಿಶ್ವನಾಥ್, ಕಿರಣ್, ಚಿರಿಯಪಂಡ ಪ್ರಶು ಪೆಮ್ಮಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.