ಉಸ್ಮಾನ್ ಹಾಜಿ ನಿಧನ: ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಂತಾಪ

30/09/2020

ಮಡಿಕೇರಿ ಸೆ. 29 : ಕೊಡಗಿನ ಸಮಸ್ತ ಹಾಗೂ ಹಲವಾರು ಸಂಘಟನೆಗಳಿಗೆ ನೇತೃತ್ವ ನೀಡುತ್ತಿದ್ದ ಮುಂಚೂಣಿ ನಾಯಕ ಉಸ್ಮಾನ್ ಹಾಜಿ ನಿಧನಕ್ಕೆ ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಂತಾಪ ವ್ಯಕ್ತಪಡಿಸಿದೆ.

ಇತ್ತೀಚೆಗೆ ಎಸ್‍ಕೆಎಸ್‍ಎಸ್‍ಎಫ್ ಜಿಸಿಸಿ ಕೊಡಗು ಸಮಿತಿ ವತಿಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಸಮಸ್ತ ಕೊಡಗು ಜಿಲ್ಲಾ ಮಾನೇಜ್ಮೆಂಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾಗಿ, ಸಿದ್ದಾಪುರ ಮುಸ್ಲಿಮ್ ಜಮಾಅತ್ ಅಧ್ಯಕ್ಷರಾಗಿ 36 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಹಾಗೂ ಅನಾಥ ಮಕ್ಕಳಿಗಾಗಿ ಇರುವ ಸಿದ್ದಾಪುರ ಮುಸ್ಲಿಂ ಅನಾಥಾಲಯ(ಎಸ್.ಎಂ.ಓ) ಇದರ ಪ್ರಮುಖ ರೂವಾರಿಯಾಗಿದ್ದರು. ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಅಲ್ಪಸಂಖ್ಯಾತ ನಾಯಕರಾದ ಉಸ್ಮಾನ್ ಹಾಜಿ ಅಲ್ಲಾಹನ ವಿಧಿಗೆ ವಿಧೇಯರಾಗಿ ನಮ್ಮನ್ನಗಲಿದ್ದಾರೆ. ಅವರ ಅಗಲಿಕೆ ಅತ್ಯಂತ ದುಃಖ ತಂದಿದೆ. ಅವರ ಅಗಲುವಿಕೆಯಿಂದ ನೊಂದ ಕುಟುಂಬಕ್ಕೆ ದೇವರು ಸಮಾಧಾನ ನೀಡಿ ಎಂದು ಪಾರ್ಥಿಸಿದರು.
ಮೃತರ ಹೆಸರಿನಲ್ಲಿ ಮಯ್ಯತ್ ನಮಾಝ್ ಹಾಗೂ ವಿಶೇಷ ಪ್ರಾರ್ಥನೆ ನಡೆಸುವಂತೆ ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಪ್ರಮುಖರು ಮನವಿ ಮಾಡಿದರು.