ತೋಟದಲ್ಲಿ ಗಾಂಜಾ ಬೆಳೆದ ಆರೋಪ : ಹೇರೂರು ಗ್ರಾಮದ ವ್ಯಕ್ತಿಯ ಬಂಧನ
30/09/2020

ಮಡಿಕೇರಿ ಸೆ.30 : ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪದಡಿ ವ್ಯಕ್ತಿಯೊಬ್ಬರನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಹೇರೂರು ಗ್ರಾಮದ ನಿವಾಸಿ ಸುಬ್ರಮಣಿ ಎಂಬುವವರು ಬಂಧಿತ ಆರೋಪಿಯಾಗಿದ್ದು, ಒಟ್ಟು 2 ಕೆ.ಜಿ 820 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಹಾಗೂ ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷಕರು ಹೆಚ್.ಎಂ.ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಎಂ.ಮಹೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾ ಉಪನಿರೀಕ್ಷಕ ವೆಂಕಟರಮಣ, ಸಿಬ್ಬಂದಿಗಳಾದ ಗಣಪತಿ, ಸಜಿ, ದಯಾನಂದ, ಪ್ರಕಾಶ, ಸಂದೇಶ, ಖಾದರ್, ಪುನೀತ್, ಚಾಲಕರುಗಳಾದ ಅರುಣ, ಜೈಶಂಕರ್ ಪಾಲ್ಗೊಂಡಿದ್ದರು.
