ಚೀನಾ ಗಡಿಗೆ ನಿರ್ಭಯಾ ಕ್ಷಿಪಣಿ

30/09/2020

ನವದೆಹಲಿ ಸೆ.30 : ಪೂರ್ವ ಲಡಾಕ್ ನಲ್ಲಿ ಸದ್ಯ ಅತ್ಯಂತ ಕಠಿಣ, ಅಹಿತಕರ ವಾತಾವರಣ ನಿರ್ಮಾಣವಾಗಿದ್ದು ಚೀನಾವನ್ನು ಎದುರಿಸಲು ಗಡಿಯಲ್ಲಿ 800 ಕಿ.ಮೀ ದೂರಕ್ಕೆ ಸಾಗಬಲ್ಲ ನಿರ್ಭಯಾ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನೂ ಭಾರತ ನಿಯೋಜಿಸಿದೆ.
ಟಿಬೆಟ್ ಹಾಗೂ ಕ್ಸಿನ್ ಝಿಯಾಂಗ್ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡರ್ ಸುಮಾರು 2 ಸಾವಿರ ಕಿಲೋಮೀಟರ್ ದೂರ ಸಾಗಿ ಶತ್ರು ಪಾಳಯದ ಗುರಿಯನ್ನು ಭೇದಿಸಬಲ್ಲ ಕ್ಷಿಪಣಿಗಳನ್ನು ನಿಯೋಜಿಸಿದ್ದು ಇದಕ್ಕೆ ಪ್ರತಿಯಾಗಿ ಭಾರತ ಸಹ ಕ್ಷಿಪಣಿಗಳನ್ನು ನಿಯೋಜಿಸಿದೆ.
ಪೂರ್ವ ಲಡಾಖ್ ನಲ್ಲಿ 500 ಕಿ.ಮೀ ದೂರಕ್ಕೆ ಸಾಗಬಲ್ಲ ಬ್ರಹ್ಮೋಸ್, ನಿರ್ಭಯಾ, 40 ಕಿ.ಮೀ ಅಂತರವನ್ನು ಭೇದಿಸಬಲ್ಲ ನೆಲದಿಂದ ಆಗಸಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಗಳನ್ನು ಭಾರತೀಯ ಸೇನೆ ನಿಯೋಜಿಸಿದೆ.
ಪೂರ್ವ ಲಡಾಕ್ ನ ಹಲವು ಘರ್ಷಣೆ ಕೇಂದ್ರಗಳಲ್ಲಿ ಯಥಾಸ್ಥಿತಿ ಮುಂದುವರಿದಿದ್ದು ಭಾರತೀಯ ಸೇನಾಪಡೆ ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ. ವಿಶೇಷವಾಗಿ ವಾಯುಪಡೆ ಚೀನಾದ ಸೇನಾಪಡೆಯ ಯಾವುದೇ ದುಸ್ಸಾಹಸವನ್ನು ಎದುರಿಸಲು ಬದ್ಧವಾಗಿದೆ ಮತ್ತು ಸಿದ್ದವಾಗಿದೆ.