ಮೋಟಾರು ವಾಹನ ತೆರಿಗೆ ಇಳಿಕೆ

September 30, 2020

ಬೆಂಗಳೂರು ಸೆ.30 : ರಾಜ್ಯದಲ್ಲಿನ 13 ರಿಂದ 20 ಆಸನ ಸಾಮಥ್ರ್ಯವುಳ್ಳ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗಧಿಪಡಿಸಿರುವ 900 ರೂ.ಗಳ ಮೋಟಾರು ವಾಹನ ತೆರಿಗೆಯನ್ನು 700 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಮೋಟಾರು ವಾಹನಗಳ ತೆರಿಗೆಯನ್ನು ಇಳಿಸಬೇಕೆಂದು ಹಲವಾರು ವಾಹನ ಮಾಲೀಕರು, ವಿವಿಧ ಸಂಘಟನೆಗಳು ಸಲ್ಲಿಸಿದ್ದ ಬೇಡಿಕೆಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ
ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ 1957 ರಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.