ಪವರ್ ಟಿವಿ ಬಂದ್ : ರೆಹಮಾನ್ ದು:ಖ

September 30, 2020

ಬೆಂಗಳೂರು ಸೆ.29 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಮಾಡಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದ ಕನ್ನಡ ಸುದ್ದಿ ವಾಹಿನಿ ಪವರ್ ಟಿವಿಯನ್ನು ಬಂದ್ ಮಾಡಿರುವುದಕ್ಕೆ ನಿರೂಪಕ ರೆಹಮಾನ್ ಹಾಸನ್ ಫೇಸ್‍ಬುಕ್ ಲೈವ್‍ನಲ್ಲಿ ಕಣ್ಣೀರಿಟ್ಟಿದ್ದಾರೆ.
ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ರಹಮಾನ್ ಅವರು ಪವರ್ ಟಿವಿ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡಿದ್ದಾರೆ. ಅವರಿಗೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದಿದ್ದಾರೆ. ಚಾನಲ್ ಬಂದ್ ಮಾಡಿದ್ದು ನಮ್ಮ ಫೇಸ್ ಬುಕ್ ಲೈವನ್ನು ಬಂದ್ ಮಾಡಿದ್ದಾರೆ. ಇದರಿಂದ 250ಕ್ಕೂ ಉದ್ಯೋಗಿಗಳ ಕುಟುಂಬ ಬೀದಿಗೆ ಬಂದಿವೆ ಎಂದು ಹೇಳಿದ್ದಾರೆ.
ಪವರ್ ಟಿವಿ ಮೂಲಕ ಸತ್ಯಕ್ಕಾಗಿ ನಾವು ಧ್ವನಿಯೆತ್ತಿದ್ದೇವೆ. ವಿಜಯೇಂದ್ರ ವಿರುದ್ಧ ಧ್ವನಿಯೆತ್ತುವುದನ್ನು ನಿಲ್ಲಿಸುವುದಿಲ್ಲ. ಇವತ್ತು ನಮ್ಮ ಕುಟುಂಬಗಳನ್ನು ಬೀದಿಗೆ ತಂದಿದ್ದೀರಿ. ನಿಮಗೇನು ಮಾಡಿದ್ದೇವೆ ಎಂದು ರೆಹಮಾನ್ ಕಣ್ಣೀರಿಟ್ಟಿದ್ದಾರೆ.