ಕೃಷಿ ಜಮೀನಿನಲ್ಲಿ ಸಂಗ್ರಹವಾದ ಮರಳು ವಿಲೇವಾರಿಗೆ ಅವಕಾಶ

30/09/2020

ಮಡಿಕೇರಿ ಸೆ.30 : ಪ್ರಸಕ್ತ(2020-21) ಸಾಲಿನಲ್ಲಿ ರಾಜ್ಯದಲ್ಲಿ ಉಂಟಾದ ಭಾರಿ ಮಳೆಯಿಂದಾಗಿ ನದಿಗಳಲ್ಲಿ ಪ್ರವಾಹ ಉಂಟಾಗಿ ನದಿ ಪಾತ್ರದ ಹಲವು ಕಡೆ ಕೃಷಿ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಮರಳು ಸಂಗ್ರಹವಾಗಿರುತ್ತದೆ. ಈ ಜಮೀನುಗಳನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಮರಳನ್ನು ತೆರವುಗೊಳಿಸುವ ಅವಶ್ಯಕತೆ ಇರುತ್ತದೆ. ಆದ್ದರಿಂದ ಪ್ರವಾಹದಿಂದ ಕೃಷಿ ಜಮೀನುಗಳಲ್ಲಿ ಸಂಗ್ರಹವಾಗಿರುವ ಮರಳನ್ನು ಡಿಸೆಂಬರ್, 31 ರವರೆಗೆ ವಿಲೇವಾರಿ ಮಾಡಲು ಪಟ್ಟಾ ಜಮೀನುಗಳ ಮಾಲೀಕರುಗಳಿಗೆ ಸರ್ಕಾರ ಅನುಮತಿ ನೀಡಿದೆ.

ಪಟ್ಟಾ ಜಮೀನಿನಲ್ಲಿ ಶೇಖರಣೆಗೊಂಡಿರುವ ಮರಳು ನಿಕ್ಷೇಪದ ಛಾಯಚಿತ್ರ, ಆರ್‍ಟಿಸಿ ಹಾಗೂ ಭಾವಚಿತ್ರದೊಂದಿಗೆ ಜಮೀನಿನ ಮಾಲೀಕರುಗಳು ಹಿರಿಯ ಭೂ ವಿಜ್ಞಾನಿಗಳ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಡಿಕೇರಿ ಇವರ ಕಚೇರಿಗೆ ನವೆಂಬರ್, 30 ರೊಳಗೆ ಮನವಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ: 08272-228523 ನ್ನು ಸಂಪರ್ಕಿಸಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರೇಷ್ಮಾ ಅವರು ತಿಳಿಸಿದ್ದಾರೆ.