ಮೇಕೇರಿಯಲ್ಲಿ ದೀನ್ ದಯಾಳ್ ಜನ್ಮ ದಿನಾಚರಣೆ

30/09/2020

ಮಡಿಕೇರಿ ಸೆ.30 : ಭಾರತೀಯ ಜನತಾ ಪಾರ್ಟಿಯ ಮೇಕೇರಿ ಶಕ್ತಿ ಕೇಂದ್ರದ ವತಿಯಿಂದ ದೀನ್ ದಯಾಳ್ ಉಪಾಧ್ಯಾಯ ಅವರ 104ನೇ ಜನ್ಮದಿನವನ್ನು ಆಚರಿಸಲಾಯಿತು.
ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು.
ಈ ಸಂದರ್ಭ ಮಾತನಾಡಿದ ಪಕ್ಷದ ಪ್ರಮುಖ ಜಿತಿನ್, ಸಮಾಜಮುಖಯಾಗಿ ಬದುಕಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಎಲ್ಲರಿಗೂ ಮಾದರಿಯಾಗಿದ್ದರು ಎಂದರು.
ಶಕ್ತಿ ಕೇಂದ್ರದ ಪ್ರಮುಖ್, ಸ್ಥಳೀಯ ಎರಡು ಬೂತ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.