ಕೊಡಗಿನಲ್ಲಿ 31 ಹೊಸ ಪ್ರಕರಣ ದೃಢ : ಸೋಂಕಿತರ ಸಂಖ್ಯೆ 2748ಕ್ಕೆ ಏರಿಕೆ

September 30, 2020

ಮಡಿಕೇರಿ ಸೆ.30 : ಜಿಲ್ಲೆಯಲ್ಲಿ ಬುಧವಾರ 31 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿ ಭಾಗಮಂಡಲ ಆಟೋನಿಲ್ದಾಣ ಸಮೀಪದ 10 ವರ್ಷದ ಬಾಲಕಿ ಮತ್ತು 30 ವರ್ಷದ ಮಹಿಳೆ. ಮಡಿಕೇರಿ ಐಟಿಐ ಜಂಕ್ಷನ್ ಹಿಂಭಾಗದ 23 ವರ್ಷದ ಪುರುಷ. ಸೋಮವಾರಪೇಟೆ ಗೌಡಳ್ಳಿಯ ಹೆಗ್ಗಳ ಗ್ರಾಮದ 34 ವರ್ಷದ ಪುರುಷ. ಕುಶಾಲನಗರ ಮುಳ್ಳುಸೋಗೆ 1ನೇ ಬ್ಲಾಕ್ ನ ಸರ್ಕಾರಿ ಶಾಲೆ ಸಮೀಪದ 61 ವರ್ಷದ ಪುರುಷ. ಸೋಮವಾರಪೇಟೆ ಕೊಡ್ಲಿಪೇಟೆ ಮುನಿಸಿಪಾಲ್ ಸಮೀಪದ 28 ವರ್ಷದ ಪುರುಷ. ಕೊಡ್ಲಿಪೇಟೆ ಕಿರಿಕೊಡ್ಲಿ ಮಠ ಸಮೀಪದ 26 ವರ್ಷದ ಪುರುಷ. ಕೊಡ್ಲಿಪೇಟೆ ವಿನಾಯಕ ವೃತ್ತ ಗಣಪತಿ ದೇವಾಲಯ ಎದುರಿನ 40 ವರ್ಷದ ಪುರುಷ ಮತ್ತು 39 ವರ್ಷದ ಮಹಿಳೆ. ಕುಶಾಲನಗರ ಅಳುವಾರ ಗಣಪತಿ ವೃತ್ತ ಸಮೀಪದ 31 ವರ್ಷದ ಪುರುಷ. ಕುಶಾಲನಗರ ಹೆಬ್ಬಾಲೆಯ ಕನಕ ಬ್ಲಾಕ್‍ನ 75 ವರ್ಷದ ಮಹಿಳೆ. ಕುಶಾಲನಗರ ಮೂಡಲಕೊಪ್ಪಲುವಿನ 45 ವರ್ಷದ ಪುರುಷ. ಕುಶಾಲನಗರ ಶಿರಂಗಾಲ ಗೇಟ್ ಸಮೀಪದ 46 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಗರಗಂದೂರು ಪಂಚಾಯತಿ ಸಮೀಪದ 49 ವರ್ಷದ ಪುರುಷ ಮತ್ತು 43 ವರ್ಷದ ಮಹಿಳೆ. ಸೋಮವಾರಪೇಟೆ ತಣ್ಣೀರುಹಳ್ಳ ಗ್ರಾಮ ಮತ್ತು ಅಂಚೆಯ 60 ವರ್ಷದ ಪುರುಷ. ವಿರಾಜಪೇಟೆ ಕೈಕೇರಿ ಕ್ಯಾಂಡಲ್ ಕಾರ್ಖಾನೆ ಸಮೀಪದ 39 ವರ್ಷದ ಮಹಿಳೆ. ಭಾಗಮಂಡಲ ಎ.ಎನ್.ಎಫ್ ಕ್ಯಾಂಪ್ ಸಮೀಪದ 24 ವರ್ಷದ ಮಹಿಳೆ. ಸೋಮವಾರಪೇಟೆ ಕೊಡ್ಲಿಪೇಟೆ ಬ್ಯಾಡಗೊಟ್ಟ ಪಂಚಾಯತ್ ಕಚೇರಿ ಸಮೀಪದ 33 ವರ್ಷದ ಪುರುಷ. ಮಡಿಕೇರಿ ಮಂಗಳಾದೇವಿ ನಗರ ಅಂಗನವಾಡಿ ಸಮೀಪದ 53 ವರ್ಷದ ಪುರುಷ. ಮಡಿಕೇರಿ ಮಹದೇವಪೇಟೆ ಉಕ್ಕಡ ರಸ್ತೆಯ 42 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 46 ಮತ್ತು 21 ವರ್ಷದ ಮಹಿಳೆಯರು. ಮಡಿಕೇರಿ ಚೈನ್ ಗೇಟ್ ವಸತಿಗೃಹದ 33 ವರ್ಷದ ಮಹಿಳೆ. ಸೋಮವಾರಪೇಟೆ ಕಾನ್ವೆಂಟ್ ಬಾಣೆಯ 28 ವರ್ಷದ ಪುರುಷ. ನಾಪೆÇೀಕ್ಲು ಬೇತು ಸರ್ಕಾರಿ ಶಾಲೆ ಸಮೀಪದ 44 ವರ್ಷದ ಪುರುಷ ಮತ್ತು 10 ವರ್ಷದ ಬಾಲಕಿ. ಕುಶಾಲನಗರ ಸರ್ಕಾರಿ ಆಸ್ಪತ್ರೆ ಸಮೀಪದ 74 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆ ಮಲಬಾರ್ ರಸ್ತೆಯ ಟಿಎಂಸಿ ವಸತಿಗೃಹದ 37 ವರ್ಷದ ಮಹಿಳೆ, 14 ವರ್ಷದ ಬಾಲಕಿ ಮತ್ತು 17 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2748 ಆಗಿದ್ದು, 2238 ಮಂದಿ ಗುಣಮುಖರಾಗಿದ್ದಾರೆ. 474 ಸಕ್ರಿಯ ಪ್ರಕರಣಗಳಿದ್ದು, 36 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 402 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.