ಕೊಡಗಿನಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 40 ಕ್ಕೆ ಏರಿಕೆ

ಮಡಿಕೇರಿ ಸೆ.30 : ಕೊಡಗಿನಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ. ವಿರಾಜಪೇಟೆ ತಾಲ್ಲೂಕು ಅಂಬಟ್ಟಿ ಗ್ರಾಮದ ನಿವಾಸಿ 53 ವರ್ಷದ ಪುರುಷ, ವಿರಾಜಪೇಟೆ ನಗರ ನಿವಾಸಿ 80 ವರ್ಷದ ಮಹಿಳೆ, ಸೋಮವಾರಪೇಟೆ ಪಟ್ಟಣದ ನಿವಾಸಿ 63 ವರ್ಷದ ಪುರುಷ, ಕುಶಾಲನಗರ ಸೋಮೇಶ್ವರ ದೇವಸ್ಥಾನ ಬಳಿಯ ನಿವಾಸಿ 74 ವರ್ಷದ ಪುರುಷ ಮೃತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಇಲ್ಲಿಯವರೆಗೆ ಒಟ್ಟು 41073 ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.
• ಪಾಸಿಟಿವ್ ಪ್ರಕರಣಗಳು-2748
• ನೆಗೆಟಿವ್ ವರದಿ ಬಂದ ಪ್ರಕರಣಗಳು-38028
• ವರದಿ ನಿರೀಕ್ಷಿತ ಪ್ರಕರಣಗಳು-297
. ಮೃತಪಟ್ಟ ಪ್ರಕರಣಗಳು-40
ದಾಖಲಿರುವ ಪ್ರಕರಣಗಳು:
ಕೋವಿಡ್ ಆಸ್ಪತ್ರೆ :89
ಕೋವಿಡ್ ಕೇರ್ ಸೆಂಟರ್ :61
ಹೋಂ ಐಸೋಲೇಶನ್ :283
ಇತರೆ ವಿಷಯಗಳು:
ಕೊಡಗು ಜಿಲ್ಲೆಯಲ್ಲಿ ಈ ದಿನ ಹೊಸದಾಗಿ 31 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ಈ ದಿನ 19 ನಿಯಂತ್ರಿತ ಪ್ರದೇಶವನ್ನು ತೆರೆಯಲಾಗಿದೆ. ಈ ಹಿಂದೆ ತೆರೆಯಲಾಗಿದ್ದ ನಿಯಂತ್ರಿತ ಪ್ರದೇಶಗಳ ಪೈಕಿ 13 ಪ್ರದೇಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಈ ದಿನ ಕೋವಿಡ್ ಸೋಂಕಿನಿಂದ 04 ಸಾವು ಸಂಭವಿಸಿದ್ದು, ವಿವರ ಕೆಳಕಂಡಂತಿದೆ.
ವಿರಾಜಪೇಟೆ ತಾಲ್ಲೂಕು ಅಂಬಟ್ಟಿ ಗ್ರಾಮದ ನಿವಾಸಿ 53 ವರ್ಷದ ಪುರುಷ, ವಿರಾಜಪೇಟೆ ನಗರ ನಿವಾಸಿ 80 ವರ್ಷದ ಮಹಿಳೆ, ಸೋಮವಾರಪೇಟೆ ಪಟ್ಟಣದ ನಿವಾಸಿ 63 ವರ್ಷದ ಪುರುಷ, ಕುಶಾಲನಗರ ಸೋಮೇಶ್ವರ ದೇವಸ್ಥಾನ ಬಳಿಯ ನಿವಾಸಿ 74 ವರ್ಷದ ಪುರುಷ ಮೃತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ:40 ಕ್ಕೇರಿದೆ.
ಈ ದಿನ 37 ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತವೆ.
ಘೋಷ್ವಾರೆ
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ:2748
ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳ ಸಂಖ್ಯೆ:2275
ಮೃತರ ಸಂಖ್ಯೆ: 40
ಸಕ್ರಿಯ ಪ್ರಕರಣಗಳ ಸಂಖ್ಯೆ: 433
ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ: 402