ಕುವೈತ್ ದೊರೆ ನಿಧನ
01/10/2020

ನವದೆಹಲಿ ಸೆ.30 : ಕುವೈತ್ ದೊರೆ (ಅಮೀರ್) ಸಬಾಹ್ ಅಲ್ ಅಹಮದ್ ಅಲ್ ಜಾಬೀರ್ ಅಲ್ ಸಬಾಹ್ (91) ಅಮೆರಿಕಾದ ಆಸ್ಪತ್ರೆಯಲ್ಲಿ ನಿಧನರಾದರು.
ಶೇಖ್ ಜಾಬೀರ್ ಅಲ್ ಸಬಾಹ್ ಅವರ ನಿಧನಾ ನಂತರ ಸಬಾಹ್ ಅಲ್ ಅಹಮದ್ 2006ರ ಜನವರಿಯಲ್ಲಿ ಕುವೈತ್ ನ ದೊರೆಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಕುವೈತ್ ದೊರೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಕುವೈತ್ ತನ್ನ ನಾಯಕನನ್ನು ಕಳೆದುಕೊಂಡಿದೆ. ಭಾರತ ತನ್ನ ಆತ್ಮೀಯ ಮಿತ್ರನನ್ನು, ಜಗತ್ತು ಒಬ್ಬ ಮುತ್ಸದ್ದಿಯನ್ನು ಕಳೆದುಕೊಂಡಿದ್ದು ಅವರು ಕುವೈತ ನಲ್ಲಿದ್ದ ಭಾರತೀಯರ ಪರ ಕಾಳಜಿ ಹೊಂದಿದ್ದರು. ಎರಡೂ ರಾಷ್ಟ್ರಗಳ ಸಂಬಂಧ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.” ಎಂದು ಹೇಳಿದ್ದಾರೆ.
