ದೀನ್ ದಾಯಳ್ ಜನ್ಮ ದಿನಾಚರಣೆ : ಶ್ರಮ ಮತ್ತು ಸಂಘಟನೆಯಿಂದ ಪಕ್ಷ ಸುಭದ್ರವಾಗಿದೆ : ಭಾ.ಜ.ಪ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್

October 1, 2020

ವಿರಾಜಪೇಟೆ:ಸೆ:30: ಪಕ್ಷವು ಯಾವುದೇ ಒಂದು ವ್ಯಕ್ತಿಯ ಅಧೀನದಲ್ಲಿರದೇ ಪಕ್ಷ ನಿಷ್ಟೆ. ತತ್ವ ಸಿದ್ದಾಂತಗಳು ಮತ್ತು ಕಾರ್ಯಕರ್ತರ ಒಗ್ಗಟ್ಟಿನ ಸಂಘಟನೆಯಿಂದ ನೆಲೆ ಕಂಡಿರುತ್ತದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕು ಮತ್ತು ನಗರ ಭಾ.ಜ.ಪ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಲಗಿದ್ದ ಪಂಡಿತ್ ದೀನ್ ದಾಯಳ್ ಉಪದ್ಯಾಯ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೀನ್ ದಾಯಳ್ ಅವರು 1916 ರಲ್ಲಿ ಜನಿಸಿ ತಮ್ಮ ಕಟ್ಟ ಹಿಂದುತ್ವವನ್ನು ಪ್ರತಿಪಾದಿಸಿಕೊಂಡು ರಾಷ್ಟøದ ನಾನಾ ಮೂಲೆಗಳಲ್ಲಿ ಸಂಚಾರ ಮಾಡಿ ಜನ ಸಂಘ ವೆಂಬ ಪಕ್ಷವನ್ನು ಕಟ್ಟಿದರು. ಅದು ಮುಂದೆ ಭಾರತೀಯ ಜನತಾ ಪಕ್ಷವೆಂದು ಘೋಷಣೆಯಾಯಿತು. ದೀನ್ ದಾಯಳ್ ಅವರು ತಮ್ಮ ಜೀವಿತಾವಧಿಯಲ್ಲಿ ಪಕ್ಷ ಸಂಘಟಿಸುವ ಚತುರತೆ ದೇಶದ ಮೇಲೆ ಅವರಿಗಿದ್ದ ಪ್ರೀತಿ ಪಕ್ಷದ ತತ್ವಗಳ ಮೇಲಿರುವ ನಂಬಿಕೆಯಿಂದ ಹಲವು ಕಾರ್ಯಕ್ರಮಗಳನ್ನು ರಚನಾತ್ಮಕವಾಗಿ ನಿರ್ವಹಿಸಿದ್ದರು. ರಾಷ್ಟ್ರೀಯ ಪಕ್ಷವಾಗಿ ನೆಲೆ ಕಂಡಿದೆ ಹಿರಿಯರ ಮಾರ್ಗದರ್ಶನ ರಾಷ್ಟø ಭಕ್ತಿ, ರಾಷ್ಟø ಜಾಗೃತಿಯ ತಳಹದಿಯ ಮೇಲೆ ನಿರ್ಮಾತವಾಗಿದೆ. ಪಕ್ಷವು ಎಂದಿಗೂ ದೀನ್ ದಾಯಳ್ ಉಪದ್ಯಾಯ ಅವರ ಸ್ಮರಣೆ ಮಾಡಲು ಜನ್ಮ ದಿನಚರಣೆಯನ್ನು ರಾಷ್ಟøದ ಎಲ್ಲಾ ಭಾಗಗಳಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ವಿಧಾನ ಸಭಾ ಅಧಿವೇಶನದಲ್ಲಿ ಹಲವು ಮಸೂದೆಗಳಿಗೆ ಅಂಗೀಕಾರ ನೀಡಲಾಗಿತ್ತು ಪ್ರಮುಖವಾಗಿ ಭೂಸುಧಾರಣೆ, ಎ.ಪಿ.ಎಂ.ಸಿ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದ್ದು. ಇದ್ದುಪಡಿ ತರಲಾಗಿರುವ ಕಾಯ್ದೆಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಗಾಡವಾಗಿ ಪರಿಗಣಿಸಿ ವಾಸ್ತವವನ್ನು ಅರಿಯುವುದನ್ನು ಬಿಟ್ಟು ಗೊಂದಲ ಸೃಷ್ಟಿ ಮಾಡಿಕೊಂಡು ಕೃಷಿಕರನ್ನು, ರೈತಾಪಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ವಿಷಾದ,
ಕೃಷಿ ಭೂಮಿಯನ್ನು ಪರಭಾರೆ ಮಾಡಲು ಆದಾಯ ಮಿತಿ 02 ಲಕ್ಷದಿಂದ ಸಿದ್ದರಾಮಯ್ಯ ಅವರ ಸರ್ಕಾರವು 25 ಲಕ್ಷಕ್ಕೆ ನಿಗಧಿಗೊಳಿಸಿತು. ಪರಬಾರೆಗೆ ನಿಗದಿ ಮಾಡಲಾಗಿದ್ದ ಮೊತ್ತವನ್ನು ನಮ್ಮ ಸರ್ಕಾರವು ತೆಗೆದುಹಾಕಿದೆ ಇದರಿಂದ ರೈತರಿಗೆ ಉಪಯೋಗವಾಗಿದೆ. ಅಲ್ಲದೆ ಎ.ಪಿ.ಎಂಸಿ ಕಾಯ್ದೆಯಲ್ಲಿ ರೈತರು ತಾನು ಬೆಳೆದ ಉತ್ಪನ್ನಗಳಿಗೆ ಏಕಮುಖ ಬೆಲೆ ನಿಗದಿ ಮಾಡಿ ಇತರ ರಾಷ್ಟøಗಳಿಗೆ ರಫ್ತು ಮಾಡಲು ಸಂಪೂರ್ಣ ಅಧಿಕಾರವನ್ನು ರೈತರಿಗೆ ನೀಡಿದೆ. ಪ್ರಸ್ತುತ ಕಾಯ್ದೆಯು ರೈತರಿಗೆ ವರದಾನವಾಗಿದೆ. ಜನಪರವಾದ ಕಾಯ್ದೆಗಳಿಗೆ ಮನ್ನಣೆ ನೀಡದೆ ಆರೋಪಗಳು ಹೊರಿಸುವುದು ಶೋಭೆಯಲ್ಲ ಎಂದರು.
ಪಕ್ಷದ ಜನಪರವಾದ ಕಾರ್ಯಕ್ರಮಗಳನ್ನು ಮೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಪಕ್ಷದ ತತ್ವಗಳನ್ನು ಗೌರವಿಸಿ, ಪಕ್ಷದ ಜನಪರ ಕಾರ್ಯಕ್ರಮಗಳನ್ನು ಜನಸಮಾನ್ಯರ ಮನೆ ಭಾಗಿಲಿಗೆ ತಲುಪಿಸುವ ಕಾರ್ಯವಾಗಬೇಕಿದೆ ಈ ನೀಟ್ಟಿನಲ್ಲಿ ಕಾರ್ಯಕರ್ತರು ಕಾರ್ಯಧಕ್ಷತೆಯನ್ನು ತೊರಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷದದಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ 20ಕ್ಕೂ ಅಧಿಕ ಮಂದಿ ಶಾಸಕರ ಸಮ್ಮುಖದಲ್ಲಿ ಭಾ.ಜ.ಪ ಕ್ಕೆ ಸೇರ್ಪಡೆಗೊಂಡರು.

ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ನೆಲ್ಲೀರ ಚಲನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದ ವೇದಿಕೆಯಲ್ಲಿ ಭಾ.ಜ.ಪ ಜಿಲಾಧ್ಯಕ್ಷ ರಾಬಿನ್ ದೇವಯ್ಯ, ಅರುಣ್ ಭೀಮಯ್ಯ. ಮತ್ತು ಹಾಸನ ಉಸ್ತುವಾರಿಗಳಾದ ಪಟ್ಟಡ ರೀನಾ ಪ್ರಕಾಶ್ ಉಪಸ್ಥಿತರಿದ್ದರು.

ಭಾ.ಜ.ಪ ಮಹಿಳಾ ಮುಖಂಡರದ ಸುಮಿ ಅವರು ಪ್ರಾರ್ಥನೆ ಮಾಡಿದರು. ಅಜ್ಜೀಕುಟ್ಟಿರ ಪ್ರವೀಣ್ ಸ್ವಾಗತಿಸಿ, ನಗರ ಭಾ.ಜ.ಪ ಅಧ್ಯಕ್ಷ ಟಿ.ಪಿ.ಕೃಷ್ಣ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ನಾನಾ ಭಾಗಗಳಿಂದ ಆಗಮಿಸಿದ ಪಕ್ಷದ ಕಾರ್ಯಕರ್ತರು ವಿವಿಧ ಘಟಕದ ಮುಖಂಡರು, ಜಿಲ್ಲಾ ಮುಖಂಡರು ಹಾಜರಿದ್ದರು.

error: Content is protected !!