ಡಾ. ಬಿ. ಆರ್. ಅಂಬೇಡ್ಕರ್ ಜನಪರ ವೇದಿಕೆ ಯಿಂದ ವಿಶ್ವ ಹಿರಿಯ ನಾಗರಿಕರ ದಿನ ಆಚರಣೆ

01/10/2020

ಮಡಿಕೇರಿ ಅ. 1 : ಡಾ. ಬಿ. ಆರ್. ಅಂಬೇಡ್ಕರ್ ಜನಪರ ವೇದಿಕೆ ವತಿಯಿಂದ ಕೂಡಿಗೆ ಶಕ್ತಿ ವೃದ್ಧಾಶ್ರಮದಲ್ಲಿ ವಿಶ್ವ ಹಿರಿಯ ನಾಗರಿಕ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಮೋಹನ್ ಕುಮಾರ್ , ಪ್ರತಿಯೊಬ್ಬರು ಜಾತಿ-ಮತ ಇಲ್ಲದೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂಬ ಆಶ್ರಯದಲ್ಲಿ ಸಂವಿಧಾನ ಬರೆದವರು ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು. ವಯೋವೃದ್ಧರು ಆಶ್ರಮಗಳಿಗೆ ಸೇರುತ್ತಿರುವುದು ಸಮಾಜ ತಲೆತಗ್ಗಿಸುವ ಕೆಲಸ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಆದಂ ಮಾತನಾಡಿ, ನಮ್ಮ ಸಂಘಟನೆ ಬಡವರ ಶೋಷಿತರ ವಯೋವೃದ್ಧರ ಪರವಾಗಿ ಹೋರಾಟವನ್ನು ಹಮ್ಮಿ ಕೊಳ್ಳುವ ಮೂಲಕ ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಸಂಘಟನೆ ಮಾಡುತ್ತದೆ ಎಂದರು. ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜೈಪ್ರಕಾಶ್ ಮಾತನಾಡಿ, ಇಂದು ದೇಶದಲ್ಲಿ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿದ್ದರು ಆಡಳಿತ ನಡೆಸುತ್ತಿರುವ ಸರಕಾರಗಳು ಮೌನ ವಹಿಸಿರುವುದು ದಲಿತ ವಿರೋಧಿ ಕೆಲಸವಾಗಿದೆ. ನಮ್ಮ ಸಂಘಟನೆ ವತಿಯಿಂದ ಇಂತಹ ಸರ್ಕಾರಗಳ ವಿರುದ್ಧ ಹೋರಾಟವನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲಾ ವರ್ಗದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ಇಂದು ವೃದ್ಧರು ಅನಾಥಾಶ್ರಮಗಳಿಗೆ ಸೇರುತ್ತಿರುವುದು ಬೇಸರದ ಸಂಗತಿ. ಎಲ್ಲಾ ಮಕ್ಕಳು ಮುಂದಿನ ದಿನಗಳಲ್ಲಿ ನಮಗೂ ವಯಸ್ಸಾಗುತ್ತದೆ ನಾವಿಂದು ಮಾಡಿರುವ ತಪ್ಪು ಮುಂದೆ ನಮ್ಮ ಮಕ್ಕಳು ನಮಗೆ ಮಾಡುತ್ತಾರೆ ಎಂಬ ತಿಳುವಳಿಕೆ ಇರಲಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭ ಡಾ||.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ಮಹಿಳಾ ಜಿಲ್ಲಾಧ್ಯಕ್ಷೆ ಫಾತಿಮಾ. ಪ್ರಮುಖರಾದ ಕುಮಾರ್, ದುರ್ಗೇಶ,ಕಲ್ಪನಾ,ಇರ್ಷಾದ್ ಪ್ರಮುಖರು ಇದ್ದರು.
ಕಾರ್ಯಕ್ರಮ ವನ್ನು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝೈನುಲ್ ಆಬಿದ್.ಕೆ.ಎ ನಿರೂಪಿಸಿ, ವಂದಿಸಿದರು.