ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 2801ಕ್ಕೆ ಏರಿಕೆ : 2275 ಮಂದಿ ಗುಣಮುಖ

01/10/2020

ಮಡಿಕೇರಿ ಅ. 1 : ಜಿಲ್ಲೆಯಲ್ಲಿ ಗುರುವಾರ ವೇಳೆಗೆ 53 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ವಾಲ್ನೂರು ತ್ಯಾಗತ್ತೂರು ಕಾಲೋನಿಯ ಮುತ್ತಪ್ಪ ದೇವಾಲಯ ಸಮೀಪದ 44 ವರ್ಷದ ಪುರುಷ. ಮಡಿಕೇರಿ ಮರಗೋಡು ಅಂಚೆಯ ಹೊಸ್ಕೇರಿ ಬೆಟ್ಟದ 34 ವರ್ಷದ ಪುರುಷ. ಸೋಮವಾರಪೇಟೆ ನೆಲ್ಲಿಹುದಿಕೇರಿ ಶಾಲೆ ರಸ್ತೆಯ 30 ವರ್ಷದ ಮಹಿಳೆ ಮತ್ತು 66 ವರ್ಷದ ಪುರುಷ. ನೆಲ್ಲಿಹುದಿಕೇರಿ ಎಂಜಿ ಕಾಲೋನಿ ಅಂಗನವಾಡಿ ಸಮೀಪದ 50 ವರ್ಷದ ಪುರುಷ. ಮಡಿಕೇರಿ ಮರಗೋಡು ಅಂಚೆಯ ಅರೆಕಾಡು ಗ್ರಾಮದ 46 ವರ್ಷದ ಮಹಿಳೆ. ಸೋಮವಾರಪೇಟೆ ನೆಲ್ಲಿಹುದಿಕೇರಿ ಪಟ್ಟಣ ಮುತ್ತಪ್ಪ ದೇವಾಲಯ ಸಮೀಪದ 57 ವರ್ಷದ ಮಹಿಳೆ. ವಿರಾಜಪೇಟೆ ಪಾಲಿಬೆಟ್ಟ ಟಾಟಾ ಎಸ್ಟೇಟ್ ನ 55 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆ ಪೊಲೀಸ್ ವಸತಿಗೃಹದ 32 ವರ್ಷದ ಪುರುಷ. ಕುಶಾಲನಗರ ಮುಳ್ಳುಸೋಗೆ ಜನತಾ ಕಾಲೋನಿಯ 24 ವರ್ಷದ ಮಹಿಳೆ. ಭಾಗಮಂಡಲ ಎ.ಎನ್.ಎಫ್ ಕ್ಯಾಂಪ್‍ನ 24 ವರ್ಷದ ಪುರುಷ. ಕುಶಾಲನಗರ ಮಾರುತಿ ಬಡಾವಣೆ ಗೌಡ ಸಮಾಜ ಸಮೀಪದ 50 ವರ್ಷದ ಪುರುಷ. ಕುಶಾಲನಗರ ಗೌಡ ಸಮಾಜ ಹಿಂಭಾಗದ 80 ವರ್ಷದ ಪುರುಷ. ಸೋಮವಾರಪೇಟೆ ಕಲ್ಕಂದೂರು ಗ್ರಾಮದ 33 ವರ್ಷದ ಪುರುಷ. ಕುಶಾಲನಗರ ಕರಿಯಪ್ಪ ಬಡಾವಣೆಯ 23 ವರ್ಷದ ಮಹಿಳೆ, 53 ವರ್ಷದ ಪುರುಷ ಮತ್ತು 50 ವರ್ಷದ ಮಹಿಳೆ. ಶಿರಂಗಾಲ ಪೆಟ್ರೋಲ್ ಪಂಪ್ ಸಮೀಪದ 45 ವರ್ಷದ ಮಹಿಳೆ. ಕುಶಾಲನಗರ ಓಂಕಾರ್ ಬಡಾವಣೆಯ 68 ವರ್ಷದ ಮಹಿಳೆ. ಕುಶಾಲನಗರ ಗುಡ್ಡೆಹೊಸೂರುವಿನ ಹಾಲು ಡೈರಿ ಸಮೀಪದ 38 ವರ್ಷದ ಪುರುಷ.
ಸೋಮವಾರಪೇಟೆ ನೆಲ್ಲಿಹುದಿಕೇರಿ ಎಂಜಿ ಕಾಲೋನಿಯ 52 ವರ್ಷದ ಪುರುಷ, 30 ವರ್ಷದ ಮಹಿಳೆ, 56 ಮತ್ತು 39 ವರ್ಷದ ಪುರುಷರು. ಸೋಮವಾರಪೇಟೆ ಕೊಡ್ಲಿಪೇಟೆಯ ನಂದಿಪುರದ 40 ವರ್ಷದ ಪುರುಷ. ಸೋಮವಾರಪೇಟೆ ಜನತಾ ಕಾಲೋನಿಯ 74 ವರ್ಷದ ಪುರುಷ. ಸೋಮವಾರಪೇಟೆ ಜೂನಿಯರ್ ಕಾಲೇಜು ರಸ್ತೆಯ 33 ವರ್ಷದ ಪುರುಷ. ಶನಿವಾರಸಂತೆ ತ್ಯಾಗರಾಜ ಕಾಲೋನಿಯ 28 ವರ್ಷದ ಮಹಿಳೆ. ಕುಶಾಲನಗರ ಶಿರಂಗಾಲ ಪಿ.ಎಚ್.ಸಿ ಸಮೀಪದ 50 ವರ್ಷದ ಮಹಿಳೆ. ಮಡಿಕೇರಿ ಮೈತ್ರಿ ಹಾಲ್ ಸಮೀಪದ ಪೊಲೀಸ್ ವಸತಿಗೃಹದ 43 ವರ್ಷದ ಪುರುಷ. ವಿರಾಜಪೇಟೆ ಟಿ.ಶೆಟ್ಟಿಗೇರಿ ಶಾಲೆ ಸಮೀಪದ 74 ವರ್ಷದ ಪುರುಷ. ವಿರಾಜಪೇಟೆ ಕೆದಮುಳ್ಳೂರು ಗ್ರಾಮ ಮತ್ತು ಅಂಚೆಯ 64 ವರ್ಷದ ಮಹಿಳೆ ಮತ್ತು 65 ವರ್ಷದ ಪುರುಷ. ಸೋಮವಾರಪೇಟೆ ಗರಗಂದೂರು ಪಂಚಾಯಿತಿ ಸಮೀಪದ 21 ವರ್ಷದ ಮಹಿಳೆ. ಸೋಮವಾರಪೇಟೆ ಗೌಡಳ್ಳಿ ಗ್ರಾಮದ ಜಿಎಂಪಿ ಶಾಲೆ ಸಮೀಪದ 84 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ದೇಚೂರು ವಿದ್ಯಾ ಗಣಪತಿ ದೇವಾಲಯ ಸಮೀಪದ 23 ವರ್ಷದ ಮಹಿಳೆ. ಸೋಮವಾರಪೇಟೆ ಕೊಡ್ಲಿಪೇಟೆ ಗ್ರಾಮ ಮತ್ತು ಅಂಚೆಯ 26 ವರ್ಷದ ಪುರುಷ. ಮಡಿಕೇರಿ ನಾಪೋಕ್ಲು ಅಂಚೆಯ ಬಲ್ಲಮಾವಟಿ ಗ್ರಾಮದ 59 ವರ್ಷದ ಪುರುಷ. ಮಡಿಕೇರಿ ಮೇಕೇರಿ ಗ್ರಾಮ ಮತ್ತು ಅಂಚೆಯ ಕಾವೇರಿ ಲೇಔಟ್‍ನ 53 ವರ್ಷದ ಪುರುಷ. ಮರಗೋಡು ಕಟ್ಟೆಮಾಡು ಗ್ರಾಮ ಮತ್ತು ಅಂಚೆಯ 64 ವರ್ಷದ ಪುರುಷ. ವಿರಾಜಪೇಟೆ ಅಂಬಟ್ಟಿ ಗ್ರಾಮ ಮತ್ತು ಅಂಚೆಯ 52 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಪೊಲೀಸ್ ವಸತಿಗೃಹದ 23 ವರ್ಷದ ಮಹಿಳೆ. ನಾಪೋಕ್ಲು ಇಂದಿರಾ ನಗರ ಅಂಗನವಾಡಿ ಸಮೀಪದ 46 ವರ್ಷದ ಮಹಿಳೆ. ನಾಪೋಕ್ಲು ಇಂದಿರಾ ನಗರ ಅಂಗನವಾಡಿ ಸಮೀಪದ 57 ಮತ್ತು 40 ವರ್ಷದ ಮಹಿಳೆ. ಚೆಯ್ಯಂಡಾಣೆ ನರಿಯಂದಡ ಗ್ರಾಮದ 44 ವರ್ಷದ ಪುರುಷ. ನಾಪೋಕ್ಲು ಹಳೆತಾಲೂಕುವಿನ 44 ವರ್ಷದ ಮಹಿಳೆ. ಕುಶಾಲನಗರ ಮಾರುತಿ ಬಡಾವಣೆ ಜನತಾ ಕಾಲೋನಿಯ 24 ವರ್ಷದ ಮಹಿಳೆ, 2 ವರ್ಷದ ಬಾಲಕ, 60 ಮತ್ತು 21 ವರ್ಷದ ಪುರುಷರು. ಕುಶಾಲನಗರ ಬಿಎಂ ರಸ್ತೆಯ ಮಹಾಲಕ್ಷ್ಮಿ ಮಹಾಲಕ್ಷ್ಮೀ ಸ್ವೀಟ್ಸ್ ಸಮೀಪದ 78 ವರ್ಷದ ಪುರುಷ ಮತ್ತು 60 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2801 ಆಗಿದ್ದು, 2275 ಮಂದಿ ಗುಣಮುಖರಾಗಿದ್ದಾರೆ. 486 ಸಕ್ರಿಯ ಪ್ರಕರಣಗಳಿದ್ದು, 40 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 395 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.