ವಿರಾಜಪೇಟೆಯ ವಿವಿಧೆಡೆ ಅ.3 ರಂದು ವಿದ್ಯುತ್ ವ್ಯತ್ಯಯ

October 1, 2020

ಮಡಿಕೇರಿ ಅ.01 : ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬಿ.ಶೆಟ್ಟಿಗೇರಿ, ವಿರಾಜಪೇಟೆ, ಬೇತ್ರಿ ಪಾಲಂಗಾಲ, ಕ್ಲಬ್ ಮಹೇಂದ್ರ ಮತ್ತು ಹೆಗ್ಗಳ ಫೀಡರ್‍ನಲ್ಲಿ ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿ ನಡೆಸಬೇಕಿದ್ದು, ಅಕ್ಟೋಬರ್, 3 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ, ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ವಿ.ಬಾಡಗ, ಕಾಕೋಟುಪೆರಂಬು, ಮಾರೂರು, ಬೇತ್ರಿ, ಕಡಂಗಮರೂರು, ಮೈತಾಡಿ, ಪಾಲಂಗಾಲ, ಕೆದಮುಳ್ಳೂರು, ಮಹೇಂದ್ರ, ಆರ್ಜಿ, ಹೆಗ್ಗಳ, ಪೆರಂಬಾಡಿ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.