ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ : ಮರು ಮೌಲ್ಯಮಾಪನದಿಂದ ಕೊಡಗಿನ 103 ವಿದ್ಯಾರ್ಥಿಗಳು ಉತ್ತೀರ್ಣ

ಮಡಿಕೇರಿ ಅ.1 : 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಜಿಲ್ಲೆಯ ಫಲಿತಾಂಶ ಹೆಚ್ಚಳವಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಪರೀಕ್ಷೆಗೆ ಹಾಜರಾದವರು ಒಟ್ಟು 1964, ಮೊದಲಿಗೆ ಉತ್ತೀರ್ಣರಾದವರು 1623. ಮರು ಮೌಲ್ಯಮಾಪನದ ನಂತರ 31 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಉತ್ತೀರ್ಣರಾದವರ ಸಂಖ್ಯೆ 1654 ಆಗಿದ್ದು, ತಾಲೂಕಿನ ಫಲಿತಾಂಶ ಶೇ.82.6 ರಿಂದ ಶೇ.84.22 ಆಗಿದೆ.
ಮಡಿಕೇರಿ ತಾಲೂಕಿನಿಂದ 1808 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1476 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಮರು ಮೌಲ್ಯಮಾಪನದಲ್ಲಿ ನಾಲ್ಕು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಫಲಿತಾಂಶ ಶೇಕಡ 81.64 ರಿಂದ 81.86 ಆಗಿದೆ.
ಸೋಮವಾರಪೇಟೆ ತಾಲೂಕಿನಿಂದ 2482 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1953 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಮರು ಮೌಲ್ಯಮಾಪನದಲ್ಲಿ 68 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಫಲಿತಾಂಶ ಶೇಕಡ 78.68 ರಿಂದ 81.42 ಕ್ಕೆ ಹೆಚ್ಚಳವಾಗುವುದರ ಮೂಲಕ ಜಿಲ್ಲೆಯ ಫಲಿತಾಂಶ ಶೇಕಡ 80.80 ರಿಂದ 82.42ಕ್ಕೆ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 164 ಶಾಲೆಗಳಲ್ಲಿ ಮೌಲ್ಯಮಾಪನದ ನಂತರ ಫಲಿತಾಂಶವನ್ನು ಪಡೆದ 3 ಶಾಲೆಗಳೂ ಸೇರಿ ಒಟ್ಟು 27 ಶಾಲೆಗಳು ಶೇ.100 ಫಲಿತಾಂಶವನ್ನು ಪಡೆದಿವೆ.
ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿದ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರಿಗೆ, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಫÀಲಿತಾಂಶ ಪಡೆದ ವಿದ್ಯಾರ್ಥಿUಳು ಹಾಗೂ ಅವರ ಪೋಷಕರುಗಳಿಗೆ ಶಿಕ್ಷಣ ಇಲಾಖಾ ಪರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಡೊ ಅವರು ಅಭಿನಂದನೆ ಸಲ್ಲಿಸಿದ್ದಾರೆ.