ಅತೀ ಉದ್ದದ ಸುರಂಗ ಉದ್ಘಾಟನೆ
02/10/2020

ಶಿಮ್ಲಾ ಅ.2 : ವಿಶ್ವದ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಅ.3ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
9.2 ಕಿ.ಮೀ ಉದ್ದದ ಅಟಲ್ ಸುರಂಗ ಮಾರ್ಗವೂ ವಿಶ್ವದಲ್ಲಿಯೇ ಅತೀ ಉದ್ದದ ಹೆದ್ದಾರಿ ಮಾರ್ಗವಾಗಿದೆ. ಮನಾಲಿಯ ದಕ್ಷಿಣ ತುದಿಯಲ್ಲಿ ಅಟಲ್ ಸುರಂಗದ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಮನಾಲಿಯಲ್ಲಿ ಭಾರೀ ಹಿಮಪಾತವಾಗುವ ಕಾರಣ ಅಲ್ಲಿ ಆರು ತಿಂಗಳು ಮಾತ್ರ ಸಂಚಾರವಿರುತ್ತಿತ್ತು. ಆದರೆ ಈ ಸುರಂಗ ಮಾರ್ಗದಿಂದ ಮನಾಲಿಯಿಂದ ಲಹೌಲ್ ಸ್ಪಿತಿ ಕಣಿವೆಯನ್ನು ವರ್ಷವಿಡಿ ಸಂಪರ್ಕಿಸಲಿದೆ. ಪ್ರತಿ 60 ಮೀಟರ್ನಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದು, ಮತ್ತು ಸುರಂಗದ ಒಳಗೆ ಪ್ರತಿ 500 ಮೀಟರ್ ನಲ್ಲಿ ತುರ್ತು ನಿರ್ಗಮನ ಸುರಂಗಳನ್ನು ನಿರ್ಮಾಣ ಮಾಡಲಾಗಿದೆ.
ಈ ಸುರಂಗವು ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46 ಕಿ.ಮೀ ಕಡಿಮೆ ಮಾಡಲಿದೆ. ನಾಲ್ಕು ಗಂಟೆಗಳ ಪ್ರಯಾಣದ ಅವಧಿ ಸಹ ಉಳಿತಾಯವಾಗಲಿದೆ ಎಂದೂ ಅವರು ಹೇಳಿದರು.
