ಟಿಕೆಟ್ ಶುಲ್ಕ ಮರು ಪಾವತಿಗೆ ನಿರ್ದೇಶನ

02/10/2020

ನವದೆಹಲಿ ಅ.2 : ಲಾಕ್ ಡೌನ್ ಕಾರಣದಿಂದ ರದ್ದಾದ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಶುಲ್ಕವನ್ನು ತಕ್ಷಣ ಮರುಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಕೋವಿಡ್-19 ಲಾಕ್ ಡೌನ್ ಪರಿಣಾಮ ಮಾರ್ಚ್ 25 ರಿಂದ ಮೇ 24 ರ ಅವಧಿಯಲ್ಲಿ ರದ್ದಾದ ವಿಮಾನಗಳ ಟಿಕೆಟ್ ಶುಲ್ಕವನ್ನು ಮರುಪಾವತಿಸಬೇಕು. ಲಾಕ್ ಡೌನ್ ಅವಧಿಯಲ್ಲಿ ಏಜೆಂಟ್ ಗಳ ಮೂಲಕ ಬುಕ್ ಟಿಕೆಟ್ ಬುಕ್ ಮಾಡಿದ್ದರೆ ವಿಮಾನಯಾನ ಸಂಸ್ಥೆಗಳು ಕೂಡಲೇ ಸಂಪೂರ್ಣ ಹಣವನ್ನು ಏಜೆಂಟ್ ಗಳಿಗೆ ಪಾವತಿಸಬೇಕು ಮತ್ತು ಏಜೆಂಟ್ ಸಹ ತಕ್ಷಣ ಪ್ರಯಾಣಿಕರಿಗೆ ಮರುಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಹಣಕಾಸಿನ ತೊಂದರೆಯಿಂದಾಗಿ ಯಾವುದೇ ವಿಮಾನಯಾನ ಸಂಸ್ಥೆಗಳು ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಅವರು ಪ್ರಯಾಣಿಕರಿಂದ ನೇರವಾಗಿ ಅಥವಾ ಟ್ರಾವೆಲ್ ಏಜೆಂಟ್ ಮೂಲಕ ಬುಕಿಂಗ್ ಮಾಡಿದ ಪ್ರಯಾಣಿಕರ ಹೆಸರಿನಲ್ಲಿ ಸಂಗ್ರಹಿಸಿದ ಶುಲ್ಕದ ಮೊತ್ತಕ್ಕೆ ಸಮನಾದ ಕ್ರೆಡಿಟ್ ಶೆಲ್ ಅನ್ನು ಒದಗಿಸಬೇಕು. ಅದು 2021, ಮಾರ್ಚ್ 31ರೊಳಗೆ ಅದನ್ನು ಉಪಯೋಗಿಸಿಕೊಳ್ಳಬಹುದು” ಎಂದು ಕೋರ್ಟ್ ಹೇಳಿದೆ.