ಬಿಜೆಪಿ ಮಡಿಕೇರಿ ನಗರ ಘಟಕದಿಂದ ಗಾಂಧಿ ಜಯಂತಿ ಆಚರಣೆ

October 2, 2020

ಮಡಿಕೇರಿ ಅ.2 : ಭಾರತೀಯ ಜನತಾ ಪಾರ್ಟಿಯ ಮಡಿಕೇರಿ ನಗರ ಘಟಕದ ವತಿಯಿಂದ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಅವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮ ಗಾಂಧಿ ಅವರ ಅಹಿಂಸಾ ತತ್ವವನ್ನು ಎಲ್ಲರೂ ಪಾಲಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಅವರು ಮಾತನಾಡಿ ಗಾಂಧಿ ಜೀವನ ಕ್ರಮದ ಕುರಿತು ಶ್ಲಾಘಿಸಿದರು, ಅಲ್ಲದೆ ದಿನದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಿಜೆಪಿ ನಗರಾಧ್ಯಕ್ಷ ಮನುಮಂಜುನಾಥ್ ಹಾಗೂ ಜಿಲ್ಲಾ ವಕ್ತಾರ ಮಹೇಶ್ ಜೈನಿ ಮಾತನಾಡಿದರು.
ಆತ್ಮನಿರ್ಭರ ಯೋಜನೆಯಡಿ ಮನೆಯಲ್ಲಿಯೇ ಸ್ವಉದ್ಯೋಗದೊಂದಿಗೆ ಸಾರ್ಥಕ ಜೀವನ ಕಂಡುಕೊಂಡಿರುವ ನಗರದ ಗೀತಾಂಜಲಿ ಹಾಗೂ ಹಿರಿಯರಾದ ನಾಗೇಶ್ ರಾವ್ ಮತ್ತು ಖ್ಯಾತ ಮುಳುಗು ತಜ್ಞ ಕೊತ್ತೋಳಿರ ರವಿಮುತ್ತಪ್ಪ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಸತೀಶ್, ಕಚೇರಿ ಕಾರ್ಯದರ್ಶಿ ಎನ್.ಜೀವನ್, ಕಾರ್ಯಕ್ರಮದ ಸಂಯೋಜಕ ಬಿ.ಎಂ.ರಾಜೇಶ್, ಸಹ ಸಂಯೋಜಕÀ ಸಂಪತ್, ನಾಗೇಶ್, ನಗರ ಕಚೇರಿ ಕಾರ್ಯದರ್ಶಿ ಬಿ.ಕೆ.ಜಗದೀಶ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಕೇಶ್. ಭಾರತೀ ರಮೇಶ್, ಕನ್ನಿಕೆ, ಅನಿತಾ ಪೂವಯ್ಯ, ಮುರುಗನ್, ಕುಶ, ಪೂಣಚ್ಚ, ಜೀವನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಮಹಾತ್ಮ ಗಾಂಧಿಗೆ ಗೌರವ ಅರ್ಪಿಸಿದರು.

error: Content is protected !!