ಅ.4 ರಂದು ಚಡಾವಿನಲ್ಲಿ ಡಾ.ಅಂಬೇಡ್ಕರ್ ಫ್ಲೆಕ್ಸ್ ಅನಾವರಣ

October 2, 2020

ಮಡಿಕೇರಿ ಅ.2 : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಪಾಜೆ ಗ್ರಾ.ಪಂ ವ್ಯಾಪ್ತಿಯ ಚಡಾವು ಘಟಕದ ವತಿಯಿಂದ ಅ.4 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಬೃಹತ್ ಫ್ಲೆಕ್ಸ್ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಗೆ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅವರು ಫ್ಲೆಕ್ಸ್ ಅನಾವರಣಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೌರವಾಧ್ಯಕ್ಷ ಹೆಚ್.ಎಂ.ಚೋಮ ಹಾಗೂ ಚಾಡವು ಘಟಕದ ಅಧ್ಯಕ್ಷ ಹೆಚ್.ಬಿ.ಶಶಿಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ದೀಪಕ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

error: Content is protected !!