ಸುಂಟಿಕೊಪ್ಪ ಗ್ರಾ. ಪಂ. ಯಲ್ಲಿ ಗಾಂಧಿ ಜಯಂತಿ ಆಚರಣೆ

02/10/2020

ಸುಂಟಿಕೊಪ್ಪ,ಅ.2: ಮಹಾತ್ಮಗಾಂಧಿಜೀ ಅವರ 151ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಜನ್ಮದಿನಾಚರಣೆಯನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಸಂತ ಅಂತೋಣಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಶ್ರೀಶಾ ಗಾಂಧೀಜಿಯವರ ಸ್ವಾಂತತ್ರ್ಯ ಹೋರಾಟದ ಸುದೀರ್ಘ ಚಳವಳಿಯ ವಿವಿಧ ಮಜಲುಗಳ ಬಗ್ಗೆ ಉಪ್ಪಿನ ಸತ್ಯಾಗ್ರಹ, ಆಹಿಂಸ ಹೋರಾಟದ ಬಗ್ಗೆ ಸವಿಸ್ತರವಾಗಿ ಹೇಳಿದಳು.
ಗ್ರಾಮ ಪಂಚಾಯಿತಿ ಪಿಡಿಓ ಮಾತನಾಡಿ ಗಾಂಧೀಜಿ ಅವರ ಆದರ್ಶದ ಗುಣಗಳನ್ನು ಎಲ್ಲಾರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಲಾವತಿ, ಪಂಚಾಯಿತಿ ಸಿಬ್ಬಂದಿಗಳಾದ ಡಿ.ಎಂ.ಮಂಜುನಾಥ್, ಶ್ರಿನಿವಾಸ್, ಸಂದ್ಯಾ ಹಾಗೂ ಪೌರಕಾರ್ಮಿಕರು ಇದ್ದರು.