ಸುಂಟಿಕೊಪ್ಪದ ಅಂಬೇಡ್ಕರ್ ಸಮಿತಿಯಿಂದ ಗಾಂಧೀಜಿ ಅವರ 151ನೇ ಜನ್ಮದಿನಾಚರಣೆ

ಸುಂಟಿಕೊಪ್ಪ,ಅ.2: ಮಹಾತ್ಮ ಗಾಂಧಿಜೀಯ 151ನೇ ಜನ್ಮದಿನಾಚರಣೆಯನ್ನು ಅಂಬೇಡ್ಕರ್ ಸಮಿತಿ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಪಿಡಿಓ ವೇಣುಗೋಪಾಲ್ ಮಾತನಾಡಿ ಭಾರತದೇಶಕ್ಕೆ ಸ್ವಾಂತತ್ರ್ಯ ತಂದುಕೊಡುವಲ್ಲಿ ಅನೇಕ ಮಹಾತ್ಮರು ಬಲಿದಾನರಾಗಿದ್ದರೆ. ಮಹಾತ್ಮ ಗಾಂಧೀಜಿಯವರು ವಿಶಿಷ್ಟ ಚಳುವಳಿಯಿಂದ ಬ್ರಿಟಿಷರ ದಾಸ್ಯ ಸಂಕೋಲೆಯಿಂದ ನಾವು ಬಿಡುಗಡೆಯಾಗಿದ್ದೇವೆ. ಸುಭದ್ರವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿ ದೇಶ ಮುಂದುವರೆಯಲು ಗಾಂಧೀಜಿಯವರು ಹಾಕಿಕೊಟ್ಟ ಸನ್ಮಾರ್ಗವೇ ನಾವು ಮುನ್ನಡೆಯಲು ಕಾರಣವಾಗಿದೆ ಎಂದರು.
ಪಂಚಾಯಿತಿ ವತಿಯಿಂದ ಸರಕಾರದ ವತಿಯಿಂದ ಮನೆಯ ಕೊಳಚೆ ಹಾಗೂ ಸ್ನಾನದ ನೀರನ್ನು ಇಂಗು ಗುಂಡಿಗಳÀನ್ನು ನಿರ್ಮಿಸಿ ಇಂಗಿಸುವ ಯೋಜನೆಯು ಇದೀಗ ಆರಂಭಗೊಂಡಿದೆ. ಸ್ಥಳೀಯ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ನಿವಾಸಿಗಳು ಪಂಚಾಯಿತಿ ಕಛೇರಿಗೆ ಮಾಹಿತಿ ನೀಡಿದ್ದಲ್ಲಿ 17,000 ಸಂಪೂರ್ಣ ಉಚಿತ ಇಂಗು ಗುಂಡಿ ನಿರ್ಮಿಸಲಾಗುವುದು. ಪ್ರತಿ ಮನೆಯಲ್ಲಿ ತರಕಾರಿ ಹಾಗೂ ಜೌಷಧಿ ಗಿಡಗಳನ್ನು ಬೆಳೆಸಲು ಪ್ರೋತ್ಸಹ ನೀಡಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಸಮಿತಿ ಅಧ್ಯಕ್ಷ ಎಂ.ಎಸ್.ರವಿವಹಿಸಿದ್ದರು.
ಸುಂಟಕೊಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಎಎಸ್‍ಐ ಪಾರ್ಥ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಪಟ್ಟುಗಳಿಗೆ ಆಟೋಟ ಕ್ರೀಡಾ ಸಾಮಾಗ್ರಿಗಳನ್ನು ವಿತರಸಿದರು.
ಸಮಾರಂಭದ ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಪೊಲೀಸ್ ನಿವೃತ್ತ ಎಎಸ್‍ಐ ಪಾರ್ಥ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರಾದ ಬಿ.ಡಿ.ರಾಜುರೈ, ಗ್ರಾ.ಪಂ. ಮಾಜಿ ಸಸ್ಯರುಗಳಾದ ನಾಗರತ್ನ ಸುರೇಶ್, ಶೋಭಾ ರವಿ, ಜೆಸಿಐ ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಅಂಗನವಾಡಿ ಕಾರ್ಯಕರ್ತರು ಇದ್ದರು.
ಮೊದಲಿಗೆ ಸೆಲಿನಾ ಜೆಫ್ರಿ ಪ್ರಾರ್ಥಿಸಿ, ಜೆಸಿ ನಿಕಟಪೂರ್ವ ಅಧ್ಯಕ್ಷ ಅರುಣ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

