ಗಾಂಜಾ ಮಾರಾಟ ಯತ್ನ : ಸೋಮವಾರಪೇಟೆಯಲ್ಲಿ ಇಬ್ಬರ ಬಂಧನ

02/10/2020

ಸೋಮವಾರಪೇಟೆ ಅ.2 : ಅಕ್ರಮವಾಗಿ ಗಾಂಜಾವನ್ನು ಖರೀದಿಸಿ, ಪಟ್ಟಣದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇಲ್ಲಿನ ಹಾನಗಲ್ಲು ಬಾಣೆ ನಿವಾಸಿ ವಿನಯ್‍ಕುಮಾರ್ ಹಾಗೂ ಅತ್ತೂರು ಗೊಂಧಿಬಸವನಳ್ಳಿ ಗ್ರಾಮದ ನಿಧೀಶ್ ಎಂಬುವವರು ಗುಡ್ಡೆಹೊಸೂರಿನಲ್ಲಿ ಬೆಂಡೆಬೆಟ್ಟ ಗ್ರಾಮದ ಅಕ್ಷಯ್ ಎಂಬುವವರಿಂದ ರೂ.20 ಸಾವಿರ ಮೌಲ್ಯದ ಅರ್ಧ ಕೇಜಿ ಗಾಂಜಾವನ್ನು ಖರೀದಿಸಿ ಸೋಮವಾರಪೇಟೆ ಪಟ್ಟಣಕ್ಕೆ ಮೋಟಾರು ಸೈಕಲ್‍ನಲ್ಲಿ ಸಾಗಿಸುತ್ತಿದ್ದ ಸಂದರ್ಭ ನಗರೂರು ಜಂಕ್ಷನ್ ಬಳಿಯಲ್ಲಿ ಖಚಿತ ವರ್ತಮಾನದ ಮೆರೆಗೆ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂದಿಸಿದ್ದಾರೆ.
ಖವೈಎಸ್‍ಪಿ ಶೈಲೇಂದ್ರ ಸಿಪಿಐ ಬಿ.ಜಿ ಮಹೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ವಿರುಪಾಕ್ಷ, ಸಿಬ್ಬಂದಿಗಳಾದ ಶಿವಕುಮಾರ್, ಪ್ರವೀಣ್, ಕೇಶವ, ನವೀನ, ಸಜೀ, ಪ್ರಕಾಶ್ ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಠಾಣಾಧಿಕಾರಿ ಶಿವಶಂಕರ್, ಪಟ್ಟಣದ ಸುತ್ತ ಮುತ್ತ ಗಾಂಜ ಪ್ರಕರಣಗಳು ಕಂಡುಬಂದಲ್ಲಿ ಇಲ್ಲಿನ ಪೊಲೀಸ್‍ಠಾಣೆಗೆ ದೂ: 08276 282040ಕ್ಕೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.