ಬಿಟ್ಟಂಗಾಲ ಅಂಬಟ್ಟಿ ಗ್ರಾಮವೊಂದರಲ್ಲೇ 16 ಮಂದಿಗೆ ಕೋವಿಡ್

October 2, 2020

ಮಡಿಕೇರಿ ಅ.2 : ಜಿಲ್ಲೆಯಲ್ಲಿ ಶುಕ್ರವಾರ 78 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2879 ಆಗಿದ್ದು, 2328 ಮಂದಿ ಗುಣಮುಖರಾಗಿದ್ದಾರೆ. 507 ಸಕ್ರಿಯ ಪ್ರಕರಣಗಳಿದ್ದು, 44 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 406 ಆಗಿದೆ ಎಂದು ಅವರು ಹೇಳಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಅಂಬಟ್ಟಿ ಗ್ರಾಮವೊಂದರಲ್ಲೇ 16 ಮಂದಿಯಲ್ಲಿ ಕೋವಿಡ್ ಸೋಂಕು ಕಂಡು ಬಂದಿದೆ. 9, 7, 14 ವರ್ಷದ ಬಾಲಕರು, 15 ವರ್ಷದ ಬಾಲಕಿ, 24, 36, 18 42, 28, 36, 50 ವರ್ಷದ ಪುರುಷರು, 22, 25, 62, 35, 40 ವರ್ಷದ ಮಹಿಳೆಯರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

error: Content is protected !!