ಎನ್‍ಎಸ್‍ಎಸ್ ನಿಂದ ಗಾಂಧೀ ಜಯಂತಿ ಆಚರಣೆ

03/10/2020

ಮಡಿಕೇರಿ ಅ.3 : ಕಾವೇರಿ ಕಾಲೇಜು ಗೋಣಿಕೊಪ್ಪಲುವಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗಾಂಧೀ ಜಯಂತಿಯನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ.ಕೆ.ವಿ.ಕುಸುಮಾಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಮುಂಭಾಗದ ಬಸ್ ನಿಲ್ದಾಣದ ಬಳಿ ಸ್ವಚ್ಛತೆ ಮಾಡುವ ಮೂಲಕ ಶ್ರಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಈ ಸಂದರ್ಭ ಚೆಟ್ಟೋಳಿರ ಶರತ್ ಸೋಮಣ್ಣ, ಎನ್‍ಎಸ್‍ಎಸ್ ಅಧಿಕಾರಿ ವನಿತ್ ಕುಮಾರ್, ಎನ್‍ಎಸ್‍ಎಸ್ ನಾಯಕರಾದ ಸುಭಾμï ಮತ್ತು ದೀಪಿಕಾ, ಕಾಲೇಜಿನ ಸಿಬ್ಬಂದಿಗಳಾದ ಡಿಕ್ಕಿ ಮತ್ತು ಅಯ್ಯಪ್ಪ ಇತರರು ಹಾಜರಿದ್ದರು.