ಶಾಸ್ತ್ರಿ ಸಮಾಧಿಗೆ ಪುಷ್ಪ ನಮನ

October 3, 2020

ನವದೆಹಲಿ ಅ.3 : ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 117ನೇ ಜನ್ಮದಿನದ ಹಿನ್ನೆಲೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜಯ ಘಾಟ್ ನಲ್ಲಿರುವ ಶಾಸ್ತ್ರಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಶದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ವಿನಯವಂತ ಮತ್ತು ದೃಢ ನಿಲುವಿನ ವ್ಯಕ್ತಿಯಾಗಿದ್ದರು. ಸರಳತೆಯ ಸಾಕಾರದಂತಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಈ ದೇಶದ ಕಲ್ಯಾಣಕ್ಕಾಗಿ ಬದುಕಿದರು. ಅವರು ಭಾರತಕ್ಕಾಗಿ ಮಾಡಿದ ಕೆಲಸಗಳನ್ನು ಅತ್ಯಂತ ಕೃತಜ್ಞತೆಯಿಂದ ಅವರ ಜಯಂತಿ ಸಂದರ್ಭದಲ್ಲಿ ನೆನೆಯುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಲಾಲ್ ಬಹದ್ದೂರ್ ಶಾಸ್ತ್ರಿಗಳ ಪುತ್ರರಾದ ಸುನಿಲ್ ಶಾಸ್ತ್ರಿ ಮತ್ತು ಅನಿಲ್ ಶಾಸ್ತ್ರಿ ಸಹ ಇಂದು ಬೆಳಗ್ಗೆ ವಿಜಯ್ ಘಾಟ್ ಗೆ ತೆರಳಿ ಗೌರವ ನಮನ ಸಲ್ಲಿಸಿದರು.

error: Content is protected !!